ಕಾಸರಗೋಡು: ಗೇಮಿಂಗ್ ಆಪ್ ಮೂಲಕ ಠೇವಣಿ ಯಿರಿಸಿದ ಹಣ ನಷ್ಟಗೊಂಡಿರುವುದರಿಂದ ಮನನೊಂದು ಯುವಕನೋರ್ವ ಇಲಿವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿ ದ್ದಾನೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಗುರು ಪುರಂ ನಿವಾಸಿಯಾದ ೨೫ರ ಹರೆಯದ ಯುವಕ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಈತನನ್ನು ಚೆಂಗಳದ ಇ.ಕೆ. ನಾಯನಾರ್ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಯುವಕನ ದೂರಿನಂತೆ ಕಾಸರಗೋಡು ನಿವಾಸಿಯಾದ ಅನ್ಸಾರ್ ಎಂಬಾತನ ವಿರುದ್ಧ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಮೆಡಿಕಲ್ ಆಫೀಸರ್ ಹಾಗೂ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ಯುವಕನಿಂದ ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
2026 ಫೆಬ್ರವರಿ 28ರಿಂದ ಮಾರ್ಚ್ 3ರ ವರೆಗಿನ ದಿನಗಳಲ್ಲಿ ಗೇಮಿಂಗ್ ಆಪ್‌ನಲ್ಲಿ ಹಣ ಠೇವಣಿಯಿರಿಸಿದರೆ ಲಾಭ ಪಡೆಯಬಹುದೆಂದು ನಂಬಿಸಿ ಗೂಗಲ್ ಪೇ ಮೂಲಕ 1,16,000 ರೂಪಾಯಿ ಹಾಗೂ 19,000 ರೂಪಾಯಿಯನ್ನು ಸ್ನೇಹಿತನ ಮೂಲಕ ನೇರವಾಗಿ ನೀಡಿರುವು ದಾಗಿ ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. 15 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್‌ನ್ನು ವ್ಯಕ್ತಿ ವಶಕ್ಕೆ ಪಡೆದುಕೊಂಡಿರುವುದಾಗಿಯೂ ಆರೋಪಿಸಲಾಗಿದೆ. ಹಣ ಹಾಗೂ ಮೊಬೈಲ್ ಫೋನ್ ನಷ್ಟಗೊಂಡಿರು ವುದರಿಂದ ಮನನೊಂದು ಯುವಕ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆತ್ನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋ ಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.






