ಚುನಾವಣೆ: ಸಮೀಕ್ಷೆಗಳಲ್ಲಿ ಹಲವು ಆಧಾರ ರಹಿತ-ವಿ.ಡಿ. ಸತೀಶನ್

ಕಾಸರಗೋಡು: ಇದೀಗ ಬಹಿರಂಗಗೊಂಡ ಸಮೀಕ್ಷೆಗಳಲ್ಲಿ ಹಲವು ಪೈಡ್ ಸಮೀಕ್ಷೆಗಳಾಗಿವೆ ಎಂದು  ಕಾಂಗ್ರೆಸ್ ನೇತಾರ ವಿ.ಡಿ. ಸತೀಶನ್ ಅಭಿಪ್ರಾಯಪಟ್ಟಿದ್ದಾರೆ. ಕಾಸರಗೋಡಿನಲ್ಲಿ ಚುನಾವಣಾ ಪ್ರಚಾರಕ್ಕೆ ತಲುಪಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಈ ಬಗ್ಗೆ ತಿಳಿಸಿದ್ದಾರೆ.

ಸರ್ವೆಗಳಲ್ಲಿ ಹಲವು ಸುಳ್ಳಾಗಿವೆ ಎಂದು ಆರೋಪಿಸಿದ ಅವರು ಜನರಲ್ಲಿ ತಪ್ಪು ಭಾವನೆ ಮೂಡಿಸುವ ಇಂತಹ ಯತ್ನ ಫಲಕಾರಿಯಾಗದೆಂದು ತಿಳಿಸಿದರು. ಯುಡಿಎಫ್ ನೂರಕ್ಕೂ ಹೆಚ್ಚು ಸೀಟುಗಳನ್ನು ಗಳಿಸಿ ಅಧಿಕಾರಕ್ಕೇರಲಿದೆ ಎಂದು ಅವರು ತಿಳಿಸಿದರು. ಎಸ್‌ಡಿಪಿಐ- ಆರ್‌ಎಸ್‌ಎಸ್ ಬೆಂಬಲದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೌನ ಪಾಲಿಸುತ್ತಿರುವುದಾಗಿಯೂ ವಿ.ಡಿ. ಸತೀಶನ್ ಆರೋಪಿಸಿದ್ದಾರೆ. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಸಹಿತ ನೇತಾರರು ಜತೆಗಿದ್ದರು. ವಿ.ಡಿ. ಸತೀಶನ್ ಇಂದು ಹಲವೆಡೆ ನಡೆಯುವ ಯುಡಿಎಫ್ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

RELATED NEWS

You cannot copy contents of this page