ಐಕ್ಯರಂಗದ ಚುನಾವಣಾ ಪ್ರಚಾರ ಸಭೆ ಮಜೀರ್ಪಳ್ಳದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ

ವರ್ಕಾಡಿ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಐಕ್ಯರಂಗದ ಅಭ್ಯರ್ಥಿ ಎಕೆಎಂ ಅಶ್ರಫ್‌ರ ಚುನಾವಣಾ ಪ್ರಚಾರಸಭೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿ ಮಾತನಾಡಿದರು.ನಿನ್ನೆ ಸಂಜೆ ಮಜೀರ್ಪಳ್ಳದಲ್ಲಿ ಸಭೆ ನಡೆಯಿತು. ಚುನಾವಣಾ ಸಮಿತಿ ಅಧ್ಯಕ್ಷ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಸಚಿವ ಬೋಸ್ ರಾಜ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಅಭ್ಯರ್ಥಿ ಎಕೆಎಂ ಅಶ್ರಫ್, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಸುಬ್ಬಯ್ಯ ರೈ, ಸೋಮಶೇಖರ ಜೆ.ಎಸ್, ಬಾಲಕೃಷ್ಣ ಪೆರಿಯ, ಎಂ. ಅಬ್ಬಾಸ್, ವಿನಯಕುಮಾರ್ ಸೊರಕೆ, ಪುತ್ತೂರು ಶಾಸಕ ಅಶೋಕ್ ರೈ, ರಮಾನಾಥ ರೈ, ಹರ್ಷಾದ್ ವರ್ಕಾಡಿ ಸಹಿತ ಹಲವರು ಭಾಗವಹಿಸಿದರು.

You cannot copy contents of this page