ಎಡರಂಗದ ಪ್ರಚಾರ ಸಭೆಯಲ್ಲಿ ಸುಭಾಷಿಣಿ ಅಲಿ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಡರಂಗದ ಅಭ್ಯರ್ಥಿ ಕೆ.ಆರ್. ಜಯಾನಂದರ ಪರವಾಗಿ ಪೈವಳಿಕೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯೆ ಸುಭಾಷಿಣಿ ಅಲಿ ಉದ್ಘಾಟಿಸಿದರು. ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ವಿ. ಜಯರಾಜನ್, ಶಾಸಕ ಇ. ಚಂದ್ರಶೇಖರನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜ ಗೋಪಾಲನ್ ಸಹಿತ ಹಲವಾರು ಮುಖಂಡರು ಭಾಗವಹಿಸಿದರು. ಸಿಜಿ ಮ್ಯಾಥ್ಯು ಸ್ವಾಗತಿಸಿ, ಅಜಿತ್ ಎಂ.ಸಿ.ಲಾಲ್‌ಬಾಗ್ ವಂದಿಸಿದರು. ಬಾಯಾರುಪದವಿನಿಂದ ರೋಡ್ ಶೋ ನಡೆಸಲಾಯಿತು.

RELATED NEWS

You cannot copy contents of this page