ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಸಾವು

ಕಾಸರಗೋಡು: ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಸಾವ ನ್ನಪ್ಪಿದ ಘಟನೆ ನಡೆದಿದೆ.  ಚೆಟ್ಟುಂಗುಳಿ ಕೆ.ಎಸ್. ಅಬ್ದುಲ್ಲ ಆಂಗ್ಲಮಾಧ್ಯಮ ಹೈಯರ್ ಸೆಕೆಂಡರಿ ಶಾಲೆ ಸಮೀಪದ ಸಿ.ಎಚ್. ಮಂಜಿಲ್‌ನ ಮೊಹಮ್ಮದ್ ನಿಹಾಲ್ (19) ಸಾವನ್ನಪ್ಪಿದ ಯುವಕ.

ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ವರ್ಷ ವಿಎಚ್‌ಸಿಇ ಪರೀಕ್ಷೆಯಲ್ಲಿ ಉತ್ತೀರ್ಣನಾದ ಮೊಹಮ್ಮದ್ ನಿಹಾಲ್ ಬಳಿಕ ವಿದ್ಯಾನಗರದ ಸುಗಂಧ ದ್ರವ್ಯ ಮಾರಾಟದಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದನು.  ಮೊಹಮ್ಮದ್ ನಿಹಾಲ್ ಸ್ಕೂಟರ್‌ನಲ್ಲಿ ಕಳೆದ ರವಿವಾರ ಉಳಿಯತ್ತಡ್ಕ ಇಸ್ಸತ್‌ನಗರದ ಮೂಲಕ ಸಾಗುತ್ತಿದ್ದ ವೇಳೆ ಉಳಿಯತ್ತಡ್ಕ ಭಾಗದಿಂದ ಬರುತ್ತಿದ್ದ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಮೊಹಮ್ಮದ್ ನಿಹಾಲ್‌ನನ್ನು ಚೆಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ.

ಸಿ.ಎ. ಅಬ್ದುಲ್ ರಜಾಕ್-ನಸೀಮ ದಂಪತಿಯ ಪುತ್ರನಾಗಿರುವ ಮೊಹಮ್ಮದ್ ನಿಹಾಲ್ ಸಹೋದರ-ಸಹೋದರಿಯರಾದ ನಸಲ್ ತನ್ವೀರ್, ಫಾತಿಮಾ ರಿಸಾ, ಆಯಿಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

RELATED NEWS

You cannot copy contents of this page