ಮತದಾನ ಕೊನೆಗೊಂಡ ಬೆನ್ನಲ್ಲೇ ತಳಿಪರಂಬ,ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳ ವಿವಿಧೆಡೆ ಆಕ್ರಮಣ: ಕಾಂಗ್ರೆಸ್ ಕಚೇರಿ, ಮನೆ, ವಾಹನಗಳಿಗೆ ಹಾನಿ

ಪಯ್ಯನ್ನೂರು: ವಿಧಾನಸಭಾ ಚುನಾವಣೆಯ ಮತದಾನ ಕೊನೆಗೊಂಡ ಬೆನ್ನಲ್ಲೇ ತಳಿಪರಂಬ ಹಾಗೂ  ಪಯ್ಯನ್ನೂರು ವಿಧಾನಸಭಾ ಕ್ಷೇತ್ರಗಳ ವಿವಿಧೆಡೆ ವ್ಯಾಪಕ ಆಕ್ರಮಣ ನಡೆದಿದೆ. ಪಯ್ಯನ್ನೂರು ಮಾವಿಚ್ಚೇರಿ ಎಂಬಲ್ಲಿ ಯುಡಿಎಫ್‌ನ ಸ್ವತಂತ್ರ ಅಭ್ಯರ್ಥಿ  ವಿ. ಕುಂಞಿಕೃಷ್ಣನ್‌ರ ಬೆಂಬಲಿಗನೂ, ಮಾಜಿ ಸಿಪಿಎಂ ನೇತಾರನಾದ ಟಿ. ಪುರುಷೋತ್ತಮನ್‌ರ ಮನೆ ಹಾಗೂ ಕಾರಿನ ಮೇಲೆ ಆಕ್ರಮಣ ನಡೆದಿದೆ. ಮನೆಯ ಕಿಟಿಕಿ ಗಾಜುಗಳನ್ನು ಹೊಡೆದು ಪುಡಿಗೈದ ದುಷ್ಕರ್ಮಿಗಳು ಅಂಗಳದಲ್ಲಿ ನಿಲ್ಲಿಸಿದ್ದ ಕಾರಿಗೆ  ಕಿಚ್ಚಿಡಲು ಯತ್ನಿಸಿದ್ದಾರೆ. ಟಿ. ಪುರುಷೋತ್ತಮನ್ ಮಾಜಿ ಸಂಸದ, ಸಿಪಿಎಂ ನೇತಾರನಾಗಿದ್ದ ಟಿ. ಗೋವಿಂದನ್‌ರ  ಅಳಿಯನಾಗಿ ದ್ದಾರೆ. ಡಿವೈಎಫ್‌ಐ, ಸಿಪಿಎಂ ನೇತಾರನಾಗಿದ್ದ ಪುರುಷೋತ್ತಮನ್ ಬಳಿಕ ಪಕ್ಷ ತ್ಯಜಿಸಿ ಜೆಎಸ್‌ಎಸ್‌ನ ರಾಜ್ಯ ನೇತಾರನಾಗಿದ್ದರು. ಅನಂತರ  ಸಿಪಿಐಗೆ ಸೇರ್ಪಡೆಗೊಂಡಿದ್ದರು.  ಬಳಿಕ  ಸಿಪಿಎಂಗೆ  ಮರಳಿ ಸೇರ್ಪಡೆಗೊಂಡಿ ರುವುದಾಗಿ ಹೇಳಲಾಗುತ್ತಿದೆ. ಆದರೆ ಸಕ್ರಿಯ ರಾಜಕೀಯದಿಂದ ದೂರ ಉಳಿದು  ಸಿಗಡಿ ಕೃಷಿ ಒಕ್ಕೂಟದ ರಾಜ್ಯ ನೇತಾರನಾಗಿಯೂ, ಪಯ್ಯನ್ನೂರಿನ ಬ್ಲೇಡ್ ಮಾಫಿಯಾ ವಿರುದ್ಧ ಒಕ್ಕೂಟದ ಪ್ರಧಾನ ನೇತಾರನಾ ಗಿದ್ದರು.  ವಿ. ಕುಂಞಿಕೃಷ್ಣನ್ ಪಕ್ಷದೊಂದಿಗೆ ಸಿಟ್ಟುಗೊಂಡು ಪಕ್ಷ ತ್ಯಜಿಸಿದ್ದರು. ಇದರಿಂದ ಬಳಿಕ ಅವರ ಪರವಾಗಿ ಇವರು ಕಾರ್ಯಾಚರಿಸಿದ್ದರೆಂದು ಹೇಳಲಾಗುತ್ತಿದೆ.

ಪಯ್ಯನ್ನೂರು ಕಾರಮೇಲ್ ಎಂಬಲ್ಲಿ ಕಾಂಗ್ರೆಸ್ ಬೆಂಬಲಿಗನಾದ ಕೆ.ಕೆ.ಪಿ ತಂಬಾನ್‌ರ ಮನೆಯ ಆವರ ಣಗೋಡೆಯನ್ನು ನಾಶಗೊಳಿಸಲಾಗಿದೆ. ಪ್ರಸ್ತುತ ಆವರಣಗೋಡೆಯಲ್ಲಿ  ವಿ. ಕುಂಞಿಕೃಷ್ಣನ್‌ರ ಚುನಾವಣಾ ಪ್ರಚಾರ ಬರೆಯಲಾಗಿತ್ತು. ತಳಿಪರಂಬ ವಿಧಾನಸಭಾ ಕ್ಷೇತ್ರದ  ಮುಲ್ಲಕ್ಕೋಡಿ ಎಂಬಲ್ಲಿ ಮಯ್ಯಿಲ್ ಮಂಡಲ ಕಾಂಗ್ರೆಸ್ ಸಮಿತಿ ಕಚೇರಿಯಾದ ಗಾಂಧಿ ಭವನ್‌ನ ಮೇಲೆ ಆಕ್ರಮಣ ನಡೆದಿದೆ.  ಕಚೇರಿಯೊಳಗೆ ನುಗ್ಗಿದ ದುಷ್ಕರ್ಮಿಗಳು ಪೀಠೋಪಕರಣವನ್ನು ಪೂರ್ಣವಾಗಿ ಪುಡಿಗೈದಿದ್ದಾರೆ. ಕಯರಳಂ ಮುಲ್ಲುಕೋಡಿ ಎಂಬಲ್ಲಿನ ಕಾಂಗ್ರೆಸ್ ಕಾರ್ಯಕರ್ತ ಪಿ. ಭಾಸ್ಕರನ್‌ರ ಮನೆ ಮೇಲೂ ಆಕ್ರಮಣ ನಡೆದಿದೆ. ಘಟನೆಗೆ ಸಂಬಂಧಿಸಿ ಭಾಸ್ಕರನ್‌ರ ಪತ್ನಿ ಕೆ.ಪಿ. ಜಿಷ್ಮಾರ ದೂರಿನಂತೆ 15 ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಮಯ್ಯಿಲ್ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ನಿನ್ನೆ ರಾತ್ರಿ 9.30ರ ವೇಳೆ ಮನೆಗೆ ಅತಿಕ್ರಮಿಸಿ ನುಗ್ಗಿದ ತಂಡ ದೂರುದಾತೆ ಹಾಗೂ ಮಕ್ಕಳನ್ನು ಕೊಲೆಗೈಯ್ಯುವುದಾಗಿ ಬೆದರಿಕೆ ಯೊಡ್ಡಿದ ಬಳಿಕ   ಗೃಹೋಪಕರ ಣಗಳು ಹಾಗೂ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಹಾನಿಗೊಳಿಸಿರುವುದಾಗಿ ದೂರಲಾಗಿದೆ. ಇದರಿಂದ ಮೂರು ಲಕ್ಷ ರೂಪಾಯಿ  ನಷ್ಟವುಂಟಾಗಿ ರುವುದಾಗಿ ದೂರಲಾಗಿದೆ. ಮುಲ್ಲಕ್ಕೋಡಿ ಎಯುಪಿ ಶಾಲೆ ಸಮೀಪ ಮತದಾನ ದಿನದಂದು ಸಿಪಿಎಂ ಕಾರ್ಯಕರ್ತನಾದ ಪಿ.ಪಿ. ಪ್ರಕಾಶ್ (55)ರನ್ನು ಇರಿದು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಭಾಸ್ಕರನ್ ಆರೋಪಿ ಯಾಗಿದ್ದಾನೆ.  ಈ ಘಟನೆಯಲ್ಲಿ ಭಾಸ್ಕರನ್ ಹಾಗೂ ಕೃಷ್ಣನ್ ಎಂಬಿವರ ವಿರುದ್ಧ ಮಯ್ಯಿಲ್ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.  ಘಟನೆ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

You cannot copy contents of this page