ಹೊಸದುರ್ಗ: ವಿಧಾನಸಭಾ ಚುನಾವಣೆ ಪೂರ್ತಿಯಾದ ಬೆನ್ನಲ್ಲೇ ಪಯ್ಯನ್ನೂರು ವಿಧಾನಸಭಾ ಮಂಡಲದ ವಿವಿಧ ಭಾಗಗಳಲ್ಲಿ ಆಕ್ರಮಣಗಳು ಮುಂದುವರಿಯುತ್ತಿದೆ. ಯುಡಿಎಫ್ ಸ್ವತಂತ್ರನಾಗಿ ಸ್ಪರ್ಧಿಸಿದ ವಿ. ಕುಂಞಿ ಕೃಷ್ಣನ್‌ರ ಬೆಂಬಲಿಗನೆಂದು ಹೇಳಲಾ ಗುವ ಎರಮಂ ಪೇರೂಲ್‌ನ ಎಂ.ಕೆ. ನಾರಾಯಣನ್‌ರ ಕಾರಿಗೆ ಬೆಂಕಿ ಹಚ್ಚ ಲಾಗಿದೆ. ಇಂದು ಮುಂಜಾನೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಅಕ್ರಮಿ ಗಳು ಪರಾರಿಯಾಗಿದ್ದಾರೆ. ಪಂಚಾ ಯತ್ ನೌಕರನಾದ ನಾರಾಯಣನ್ ಎನ್‌ಜಿಒ ಯೂನಿಯನ್ ಕಾರ್ಯ ಕರ್ತರಾಗಿದ್ದಾರೆ.
ಕುಂಞಿಕೃಷ್ಣನ್ ಎತ್ತಿಹಿಡಿದ ಹುತಾತ್ಮ ಫಂಡ್‌ಗೆ ಸಂಬಂಧಿಸಿದ ಆರೋಪವನ್ನು ಬೆಂಬಲಿಸಿ ನಾರಾಯ ಣನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದರ ವಿರೋಧದಿಂದ ಆಕ್ರಮಿಸಲಾಗಿದೆ ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿಸಿದ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.
ವಿ. ಕುಂಞಿಕೃಷ್ಣನ್‌ರ ಕೃಷಿಸ್ಥಳ ದಲ್ಲೂ ಆಕ್ರಮಣ ನಡೆಸಲಾಗಿದೆ. ಪಯ್ಯ ನ್ನೂರು ಕಾಂಗೋಲ್ ಕರಿಂಗುಳಿಯ ಕೃಷಿ ಸ್ಥಳದಲ್ಲಿ ಬೆಂಕಿ ಹಚ್ಚಲಾಗಿದೆ. ವಿ. ಕುಂಞಿಕೃಷ್ಣನ್‌ರನ್ನು ಬೆಂಬಲಿಸಿದರೆಂಬ ಹೆಸರಲ್ಲಿ ಸಿಪಿಎಂ ಕಾರ್ಯಕರ್ತನಾದ ಪಯ್ಯನ್ನೂರು, ಮಾವಿಚ್ಚೇರಿ ನಿವಾಸಿ ಟಿ. ಪುರುಷೋತ್ತಮನ್‌ರ ಮನೆಗೂ, ಕಾರಿಗೂ ನಿನ್ನೆ ಆಕ್ರಮಣ ನಡೆಸಲಾಗಿತ್ತು. ಈ ಘಟನೆಯ ಬೆನ್ನಲ್ಲೇ ಅಕ್ರಮಿಗಳನ್ನು ಪತ್ತೆಹಚ್ಚಲಿರುವ ಪೊಲೀಸರ ತನಿಖೆ ಮುಂದುವರಿಯುತ್ತಿರುವ ಮಧ್ಯೆಯೇ ಇಂದು ಮುಂಜಾನೆ ಮತ್ತೆ ಅಕ್ರಮ ಘಟನೆಗಳು ಸಂಭವಿಸಿವೆ.







