ಬದಿಯಡ್ಕ: ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಕುಂಬ್ಡಾಜೆ ಉಬ್ರಂಗಳ ಪಡುಮೂಲೆ ನಿವಾಸಿ ಬಾಲಕೃಷ್ಣ ಪೂಜಾರಿ ಎಂಬವರ ಪುತ್ರ ಅಕ್ಷಿತ್ (21) ಮೃತಪಟ್ಟ ಯುವಕನಾಗಿದ್ದಾರೆ. ಇವರು ಎ.ಸಿ ಮೆಕ್ಯಾನಿಕ್ ಆಗಿದ್ದರ. ಈ ತಿಂಗಳ 6ರಂದು ಮನೆಯಲ್ಲಿ ಇಲಿವಿಷ ಸೇವಿಸಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಅಕ್ಷಿತ್ ಪತ್ತೆಯಾಗಿದ್ದರ. ಇದರಿಂದ ಕೂಡಲೇ ಇವರನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಿದರೂ ಫಲಕಾರಿ ಯಾಗದೆ ನಿನ್ನೆ ಮಧ್ಯಾಹ್ನ ಇವರು ಮೃತಪಟ್ಟಿದ್ದಾರೆ.
ಮೃತರು ತಂದೆ, ತಾಯಿ ಶಶಿಕಲಾ, ಸಹೋದರ ಅವಿನಾಶ್, ಸಹೋದರಿ ಗೀತಾಂಜಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






