ಅವಯವ ಅವ್ಯವಹಾರ ಪ್ರಕರಣ: ಮುಖ್ಯ ಸೂತ್ರಧಾರ ನಜೀಬ್‌ನ ಕಾಸರಗೋಡಿನ ಮನೆ ಸಹಿತ ರಾಜ್ಯದ ವಿವಿಧೆಡೆ ಇ.ಡಿ. ದಾಳಿ

ಕಾಸರಗೋಡು: ಕೇರಳವನ್ನು ಕೇಂದ್ರವನ್ನಾಗಿಸಿ ನಡೆಸುತ್ತಿರುವ ಅಕ್ರಮ ಅವಯವ ಅವ್ಯವಹಾರ ದಂಧೆಯ ಪ್ರಧಾನ ಸೂತ್ರಧಾರ ಕಾಸರಗೋಡು  ಮುಹಮ್ಮದ್ ನಜೀಬ್ ಕಲ್ಲಟ್ರನ  ಕಳನಾಡಿನಲ್ಲಿ ರುವ ಮನೆ ಸಹಿತ  ರಾಜ್ಯದ ವಿವಿಧೆಡೆಗಳಲ್ಲಿ  ಇಂದು ಇ.ಡಿ ದಾಳಿ ನಡೆಸುತ್ತಿದೆ.   ಎರ್ನಾಕುಳಂ, ಕೊಲ್ಲಂನ ಕೆಲವು ಆಸ್ಪತ್ರೆಗಳು ಹಾಗೂ ವ್ಯವಹಾರದ ಕೇಂದ್ರಗಳಲ್ಲಿ ಇಂದು ಬೆಳಿಗ್ಗಿನಿಂದ ಏಕ ಕಾಲದಲ್ಲಿ ಇ.ಡಿ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ. ಇದೊಂದು ಅಂತಾರಾಷ್ಟ್ರೀಯ ಅವಯವ ಸಾಗಾಟ ದಂಧೆಯಾಗಿದೆ ಯೆಂದು ಇ.ಡಿ ನಡೆಸಿದ ತನಿಖೆ ಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ. ಅವಯವ ದಾನಕ್ಕಾಗಿ ಮುಂದಾಗುವವರಿಗೆ 5 ಲಕ್ಷದಿಂದ 10 ಲಕ್ಷ ರೂಪಾಯಿ ತನಕ ನೀಡಿ  ಅವರಿಂದ ಅವಯವಗಳನ್ನು ಪಡೆದ ಬಳಿಕ  ಅವುಗಳನ್ನು 20ರಿಂದ 50 ಲಕ್ಷ ರೂ. ತನಕ  ಮಾರಾಟ ಮಾಡು ವುದು ಈ ದಂಧೆಯ ಪ್ರಧಾನ ಕಸುಬಾಗಿದೆ ಯೆಂದು ತನಿಖೆಯಲ್ಲಿ ಸ್ಪಷ್ಟಗೊಂ ಡಿದೆ. ಇದರಲ್ಲಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹಣ ವ್ಯವಹಾರವೂ ನಡೆಯುತ್ತಿದೆಯೆಂ ಬುವುದನ್ನು ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಇ.ಡಿ ಇಂದು ದಂಧೆಯ ಪ್ರಧಾನ ಸೂತ್ರಧಾರನಾದ ಮುಹಮ್ಮದ್ ನಜೀಬ್ ಕಲ್ಲಟ್ರನ ಕಳನಾಡಿ ನಲ್ಲಿರುವ ಮನೆ ಮತ್ತು ಮೇಲ್ಪರಂಬದಲ್ಲಿರುವ ಆತನ ಪ್ರಧಾನ ವ್ಯವಹಾರ ಕೇಂದ್ರವಾದ ಕಂಪ್ಯೂಟರ್ ಸೆಂಟರ್‌ಗೂ ಇಂದು ಬೆಳಿಗ್ಗೆ ಇ.ಡಿ ತಲುಪಿ ತಪಾಸಣೆ ಆರಂಭಿಸಿದೆ. ಇದರ ಹೊರತಾಗಿ ಕೊಲ್ಲಂ, ಎರ್ನಾಕುಳಂನಲ್ಲಿರುವ ಹಲವು ಆಸ್ಪತ್ರೆಗಳು ಮತ್ತು ಈ ದಂಧೆಯ ಇತರ ವ್ಯವಹಾರ ಕೇಂದ್ರಗಳಿಗೆ ಇ.ಡಿ ದಾಳಿ ನಡೆಸಿದೆ.

You cannot copy contents of this page