ಕುಂಬಳೆ: ಎಲ್ಲಾ ಸಂದರ್ಭಗಳಲ್ಲೂ ಜೊತೆಗೂಡಿ ಬಿಜೆಪಿಯನ್ನು ಸೋಲಿಸಬಹುದೆಂದು, ಭ್ರಷ್ಟಾಚಾರ ಪ್ರಶ್ನಿಸಲ್ಪಡಲಿಕ್ಕಿಲ್ಲವೆಂದು ತಿಳಿದುಕೊಂಡ ಎಡ-ಬಲ ಒಕ್ಕೂಟಗಳ ಧೋರಣೆ ಈ ವಿಧಾನಸಭಾ ಚುನಾವಣೆಯೊಂದಿಗೆ ಇಲ್ಲದಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೂವರು ಬಿಜೆಪಿ ಪ್ರತಿನಿಧಿಗಳನ್ನು ರಾಜ್ಯ ವಿಧಾನಸಭೆಗೆ ಆಯ್ಕೆ ಮಾಡಿರುವುದರ ಮೂಲಕ ಬಿಜೆಪಿ ಕಾರ್ಯಕರ್ತರ ನಿರೀಕ್ಷೆ ಹಾಗೂ ಹೊಣೆಗಾರಿಕೆ ಹೆಚ್ಚಿದೆ.
ರಾಜ್ಯದಲ್ಲಿ ಎಡ-ಬಲ ಒಕ್ಕೂಟ ಗಳಿಗಿರುವ ಬದಲಾಗಿ ಬಿಜೆಪಿಯನ್ನು ಜನರು ಕಂಡುಕೊಂಡಿರುವುದಾಗಿಯೂ ಈ ಮೂವರು ಶಾಸಕರು ವಿಧಾನಸಭೆ ಯಲ್ಲಿ ಬದಲಿ ಶಕ್ತಿಗಳಾಗಿ ಬದಲಾಗು ವರೆಂದು ಅಶ್ವಿನಿ ನುಡಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ , ಹಿರಿಯ ಮುಖಂಡ ವಿ. ರವೀಂದ್ರನ್ ಧ್ವಜಾರೋ ಹಣಗೈದರು. ಕುಂಬಳೆ ಸೌತ್ ಏರಿಯಾ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಜನಸಂಘ, ಬಿಜೆಪಿಯ ಹಿರಿಯ ಕಾರ್ಯಕರ್ತರನ್ನು ಗೌರವಿಸ ಲಾಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಸತೀಶ್ಚಂದ್ರ ಭಂಡಾರಿ, ಸುಬ್ಬಯ್ಯ ರೈ, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ, ಮಂಡಲ ಉಪಾಧ್ಯಕ್ಷರಾದ ವಿಕ್ರಮ್ ಪೈ, ಪ್ರೇಮಾವತಿ, ದಯಾನಂದ ಕುಲಾಲ್, ಉತ್ತರ ವಲಯ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರೈ, ವಿನೋದ್ ಕೊಪಾಡಿ, ಜನಪ್ರತಿನಿಧಿಗಳು, ಹಿರಿಯ ಮುಖಂಡರು ಭಾಗವಹಿಸಿದರು.







