ಕೆವಿವಿಇಎಸ್ ಜಿಲ್ಲಾ ಕೌನ್ಸಿಲ್ ಸಭೆ: ಪದಾಧಿಕಾರಿಗಳ ಆಯ್ಕೆ

ಕಾಸರಗೋಡು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕೌನ್ಸಿಲ್ ಸಭೆ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿತು.  ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ. ಅಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದು, ರಾಜ್ಯಾಧ್ಯಕ್ಷ ರಾಜು ಅಪ್ಸರ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಸ್ಯ ಮೇಚೇರಿ ಪ್ರಧಾನ ಭಾಷಣ ಮಾಡಿದರು. ರಾಜ್ಯ ಕೋಶಾಧಿಕಾರಿ ಎಸ್. ದೇವರಾಜನ್, ರಾಜ್ಯ ಉಪಾಧ್ಯಕ್ಷ ಎಂ.ಕೆ. ಥೋಮಸ್ ಕುಟ್ಟಿ, ರಾಜ್ಯ ಕಾರ್ಯದರ್ಶಿಗಳಾದ ವೈ. ವಿಜಯನ್, ವಿ. ಸಬಿಲ್‌ರಾಜ್, ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಕೆ.ಎ. ಹಮೀದ್, ಕೊಲ್ಲಂ ಜಿಲ್ಲಾ ಉಪಾಧ್ಯಕ್ಷ ಜೋಸ್ ಬಾಲರಮ ಮಾತನಾಡಿದರು. ಕೆ.ಜೆ. ಸಜಿ ಸ್ವಾಗತಿಸಿ, ಮಾಹಿನ್ ಕೋಳಿಕ್ಕರ ವಂದಿಸಿದರು.

ರಾಜ್ಯ ಉಪಾಧ್ಯಕ್ಷ ಬಾಬು ಕೋಟಯಿಲ್ ಪದಾಧಿಕಾರಿಗಳ ಚುನಾವಣೆ ನಿಯಂತ್ರಿಸಿದರು. ಜಿಲ್ಲಾಧ್ಯಕ್ಷರಾಗಿ ಕೆ. ಅಹಮ್ಮದ್ ಶರೀಫ್ ಆಯ್ಕೆಯಾದರು. ಸತತ ೮ನೇ ಬಾರಿ ಇವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೆ.ಜೆ. ಸಜಿ (ಪ್ರಧಾನ ಕಾರ್ಯದರ್ಶಿ), ಪಿ.ಪಿ. ಮುಸ್ತಫ (ಜಿಲ್ಲಾ ಕೋಶಾಧಿಕಾರಿ), ಎ.ಎ. ಅಸೀಸ್, ಹಂಸ ಪಾಲಕ್ಕಿ, ಕೆ.ವಿ. ಸುರೇಶ್ ಕುಮಾರ್, ಥೋಮಸ್ ಕಾನಾಟ್, ಎಂ.ವಿ. ಹರಿಹರಸುತನ್, ಶಿಹಾಬ್ ಉಸ್ಮಾನ್, ಸಿ.ಎಚ್. ಅಬ್ದುಲ್ ರಹಿಮಾನ್, ಆಸಿಫ್ ಸಿ.ಕೆ.(ಉಪಾಧ್ಯಕ್ಷರು), ಕುಂಞಿರಾಮನ್ ಆಕಾಶ್, ದಿನೇಶ್ ಕೆ, ಕೆ.ವಿ. ದಾಮೋದರನ್, ಮುಹಮ್ಮದ್ ಕುಂಞಿ ಕುಂಜಾರು, ಬಶೀರ್ ಕಲ್ಲಂಗಡಿ, ಅಶ್ರಫ್ ಕೆ. ಜಿಲ್ಲಾ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.

You cannot copy contents of this page