ಸಮಸ್ತ ಕಾರ್ಯಕರ್ತ ಹೃದಯಾಘಾತದಿಂದ  ನಿಧನ

ನೀರ್ಚಾಲು: ಮುಂಡ್ಯತ್ತಡ್ಕ ಬಳಿಯ ಬಾಪಲಿಪೊನ ತೊಟ್ಟಿ ನಿವಾಸಿ ಟಿ.ಎಂ. ಅಬ್ದುಲ್ ಅಸೀಸ್ (59) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ಸಂಜೆ ಮನೆಯಲ್ಲಿ ಹೃದಯಾಘಾತವುಂಟಾದ ಇವರನ್ನು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿದರೂ ಜೀವ ರಕ್ಷಿಸಲಾಗಲಿಲ್ಲ. ಇವರು ಸಮಸ್ತ ಹಾಗೂ ಪೋಷಕ ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿದ್ದರು.

ಮೃತರು ಪತ್ನಿ ಮೈಮೂನ, ಮಕ್ಕಳಾದ ನಸ್ರೀನ, ನೌಫಲ್, ನೌರಿನ, ನಿಹಾಲ್, ನುಹ್‌ಮಾನ್, ಅಳಿಯಂದಿ ರಾದ ಅಯ್ಯೂಬ್ ಉರ್ಮಿ, ನೌಫಲ್ ಚಳ್ಳಂಗಯ, ಸೊಸೆ ನಾಫಿಯ, ಸಹೋದರರಾದ ಟಿ.ಎಂ. ಸತ್ತಾರ್, ಟಿ.ಎಂ. ಹನೀಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಬಾಪಲಿಪೊನ ಜುಮಾ ಮಸೀದಿಯಲ್ಲಿ ನಡೆಸಲಾಯಿತು.

You cannot copy contents of this page