ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ: ಕೊಂಡೆವೂರು ಶ್ರೀಗಳಿಂದ ಧಾರ್ಮಿಕ ಸಭೆ ಉದ್ಘಾಟನೆ

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಜರಗುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ನಿನ್ನೆ ನಡೆದ ಧಾರ್ಮಿಕ ಸಭೆಯನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನಗೈದರು. ಬ್ರಹ್ಮಕಲಶೋತ್ಸವ ಸಮಿತಿ ರಕ್ಷಾಧಿಕಾರಿ ನ್ಯಾಯವಾದಿ ಎ. ಸದಾನಂದ ರೈ ಅಧ್ಯಕ್ಷತೆ ವಹಿಸಿದರು. ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ಉಪಸ್ಥಿತರಿದ್ದರು. ಕ್ರೈಮ್‌ಬ್ರಾಂಚ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಬಾಲಕೃಷ್ಣನ್ ನಾಯರ್ ಪಿ, ನ್ಯಾಯವಾದಿ ನಾರಾಯಣ ಭಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಪಿ. ಮುರಳೀ ಧರನ್ ಮುಖ್ಯ ಅತಿಥಿಗಳಾಗಿದ್ದರು. ಬಾಲಗೋಕುಲ ಜಿಲ್ಲಾ ಸಮಿತಿ ಸದಸ್ಯ ನ್ಯಾಯವಾದಿ ಪ್ರವೀಣ್ ಕೋಡೋತ್ ಧಾರ್ಮಿಕ ಉಪನ್ಯಾಸ ನೀಡಿದರು.

ನಗರಸಭಾ ಕೌನ್ಸಿಲರ್ ಅನಿಲ್ ಚೆನ್ನಿಕ್ಕೆರೆ, ಕೆ. ಸುರೇಶ್, ರಾಮಚಂದ್ರ ಕಾಮತ್, ಕೆ.ಸಿ. ಜಯರಾಜನ್, ಡಾ. ತೇಜಸ್ವೀ ಮಹಾಬಲ ಭಟ್, ವಿಶ್ವನಾಥ ಮಣಿಯಾಣಿ ಕೊರಕ್ಕೋಡು ಶುಭ ಕೋರಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ರವೀಂದ್ರ ಕೋಟೆಕಣಿ ಸ್ವಾಗತಿಸಿ, ಕಾರ್ಯದರ್ಶಿ ರಾಘವೇಂದ್ರ ಬದಿಬಾಗಿಲು ವಂದಿಸಿದರು. ವರಪ್ರಸಾದ್ ಕೋಟೆಕಣಿ ನಿರೂಪಿಸಿದರು.

RELATED NEWS

You cannot copy contents of this page