ತಿರುವನಂತಪುರ: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮುಸ್ಲಿಂ ಲೀಗ್ನ ಹಿರಿಯ ನೇತಾರ ಹಾಗೂ ಮಲಪ್ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪಿ.ಕೆ. ಕುಂಞಾಲಿಕು ಟ್ಟಿಯವರು 85,074 ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಈ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಕುಂಞಾಲಿಕುಟ್ಟಿ ಪಾತ್ರರಾಗಿದ್ದಾರೆ.
ಅತೀ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಯೆಂದರೆ ಮಾಜಿ ಶಿಕ್ಷಣ ಸಚಿವ ಮಣಲೂರಿನ ಸಿಪಿಎಂ (ಎಡರಂಗ) ಸಿ. ರವೀಂದ್ರನ್ ಆಗಿದ್ದಾರೆ. ಇವರು ಕೇವಲ 126 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.







