ಅಲ್ಲಲ್ಲಿ ಗುಡುಗು ಸಹಿತ ಮಿಂಚು: ಮೇ 10ರವರೆಗೆ: ಜಾಗ್ರತೆ ಪಾಲಿಸಲು ಕರೆ

ಕಾಸರಗೋಡು: ರಾಜ್ಯದ ಕೆಲವು ಕಡೆಗಳಲ್ಲಿ ಮೇ 10ರವರೆಗೆ ಮಿಂಚು ಸಹಿತದ ಮಳೆ ಹಾಗೂ ಗಂಟೆಗೆ 4೦ರಿಂದ 5೦ ಕಿಲೋ ಮೀಟರ್ ವೇಗದಲ್ಲಿ ಗಾಳಿಗೂ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಜನರು ಜಾಗ್ರತೆ ವಹಿಸಲು ಕರೆ ನೀಡಲಾಗಿದೆ. ಮಿಂಚು ಅಪಾಯಕರವಾಗಿದೆ. ಮನುಷ್ಯರಿಗೆ ಹಾಗೂ ಮೃಗಗಳಿಗೆ ಜೀವ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ಹಾನಿಗೊಳಿಸಲಿರುವ ಸಾಧ್ಯತೆಯು ಇದ್ದು ನಾಶನಷ್ಟ ಸಂಭವಿಸಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ತೀವ್ರ ಗಾಳಿ ಹಾಗೂ ಮಿಂಚಿಗೆ ಸಾಧ್ಯತೆ ಇರುವ ಸಂದರ್ಭದಲ್ಲಿ ಬಾಗಿಲು ಹಾಗೂ ಕಿಟಿಕಿಗಳನ್ನು ಮುಚ್ಚಬೇಕು. ಬಾಗಿಲು ಹಾಗೂ ಕಿಟಿಕಿ ಹತ್ತಿರ ನಿಲ್ಲಬಾರದು. ಕಟ್ಟಡದೊಳಗೆ ಕುಳಿತುಕೊಂಡು ಗೋಡೆ ಸ್ಪರ್ಶಿಸದಿರುವುದು ಉತ್ತಮ.  ಗೃಹೋಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು. ಮಿಂಚು ಗುಡುಗು ಸಮಯದಲ್ಲಿ ದೂರವಾಣಿ ಉಪಯೋಗಿ ಸುವುದನ್ನು ಹೊರತುಪಡಿಸಬೇಕು. ತೆರೆದ ಸ್ಥಳದಲ್ಲಿ, ತಾರಸಿಯಲ್ಲಿ, ಮಕ್ಕಳು ಆಟವಾಡುವುದನ್ನು ಹೊರತುಪಡಿಸಬೇಕು. ಮಿಂಚಿನ ಸಮಯದಲ್ಲಿ ಮರಗಳಡಿಯಲ್ಲಿ ನಿಲ್ಲಬಾರದು, ವಾಹನಗಳನ್ನು ಮರದಡಿಯಲ್ಲಿ ನಿಲುಗಡೆಗೊಳಿ ಸಬಾರದು. ಸಂಚಾರ ಸಮಯದಲ್ಲಿ ಮಿಂಚು ಕಂಡು ಬಂದರೆ ವಾಹನದೊಳಗೆ ಕುಳಿತು ಕೊಳ್ಳುವುದು ಉತ್ತಮವಾಗಿದೆ. ಸೈಕಲ್, ಬೈಕ್, ಟ್ರಾಕ್ಟರ್ ಮೊದಲಾದ ವಾಹನಗಳಲ್ಲಿ ಮಿಂಚಿನ ಸಮಯ ದಲ್ಲಿ ಸಂಚಾರ ಹೊರತುಪಡಿ ಸುವುದು, ಮಿಂಚು ಮುಗಿಯುವ ವರೆಗೆ ಸುರಕ್ಷಿತವಾದ ಸ್ಥಳದಲ್ಲಿ ನಿಲ್ಲುವುದು ಕ್ಷೇಮ.  ಮಿಂಚು ಕಂಡುಬರುವಾಗ ಜಲಾಶಯಗಳಲ್ಲಿ ಮೀನು ಹಿಡಿಯಲು, ಸ್ನಾನ ಮಾಡಲು ತೆರಳಬಾರದು. ಮೋಡ ಕಂಡು ಬಂದರೆ ಮೀನುಗಾರಿಕೆ, ಬೋಟಿಂಗ್ ಮೊದಲಾದ ಕೆಲಸಗಳನ್ನು ನಿಲ್ಲಿಸಿ ದಡಕ್ಕೆ ಹಿಂತಿರುಗುವುದು ಉತ್ತಮವೆಂದು ಸೂಚಿಸಲಾಗಿದೆ.

You cannot copy contents of this page