ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು: ತನಿಖೆಗೆ ಜಿಲ್ಲಾಧಿಕಾರಿ ಆದೇಶ

ಕಾಸರಗೋಡು: ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಸಂಬಂಧ ತುರ್ತು ತಪಾಸಣೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಆದೇಶಿಸಿದರು. ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ವರದಿ ನೀಡುವುದಕ್ಕೆ ತನಿಖಾ ತಂಡವನ್ನು ಜಿಲ್ಲಾಧಿಕಾರಿ ನೇಮಕಗೊಳಿಸಿದ್ದಾರೆ. ಕಾಞಂಗಾಡ್ ಆರ್‌ಡಿಒರ ನೇತೃತ್ವದಲ್ಲಿರುವ ತಂಡ ತಪಾಸಣೆ ನಡೆಸಲಿದೆ.

ರೆವೆನ್ಯೂ ಡಿವಿಶನಲ್ ಆಫೀಸರ್ ಸಂಚಾಲಕರಾಗಿ, ತಹಶೀಲ್ದಾರ್, ಲೋಕೋಪಯೋಗಿ ರಸ್ತೆ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್, ಆರ್‌ಟಿಒ, ಚೆರುವತ್ತೂರು ಪಂ. ಕಾರ್ಯದರ್ಶಿ, ಸೋಯಿಲ್ ಕನ್ಸರ್ವೇಟರ್, ಜಿಯೋಲಜಿಸ್ಟ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಪ್ರತಿನಿಧಿ ಎಂಬಿವರು ಸದಸ್ಯರಾಗಿರುವ ಸಮಿತಿ ತನಿಖೆ ನಡೆಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದಿತ್ಯವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ೫೦ ಮೀಟರ್‌ನಷ್ಟು ಉದ್ದಕ್ಕೆ ಬಿರುಕು ಕಂಡು ಬಂದಿತ್ತು.

RELATED NEWS

You cannot copy contents of this page