ವಿವಾಹ ಭರವಸೆ ನೀಡಿ ಯುವತಿಯ ಎಂಟೂವರೆ ಲಕ್ಷ ರೂ. ವಶಪಡಿಸಿದ ಬಳಿಕ ಮಾನಭಂಗ: ಯುವಕನ ವಿರುದ್ಧ ಕೇಸು

ಕಾಸರಗೋಡು: ಮ್ಯಾಟ್ರಿಮೋನಿ ಸೈಟ್‌ನಲ್ಲಿ ಪರಿಚಯಗೊಂಡ ಯುವತಿಯನ್ನು ಮಾನಭಂಗಗೈದಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 32ರ ಹರೆಯದ ಯುವತಿ ನೀಡಿದ ದೂರಿನಂತೆ ವಡಗರ ನಿವಾಸಿಯಾದ ಮುಹಮ್ಮದ್ ಶಮ್ಮಾಸ್ ಎಂಬಾತನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸ್ ಕೇಸು ದಾಖಲಿಸಿದೆ.

ಮ್ಯಾಟ್ರಿಮೋನಿ ಸೈಟ್ ಮೂಲಕ ಯುವತಿ ಹಾಗೂ ಮುಹಮ್ಮದ್ ಶಮ್ಮಾಸ್ ಪರಿಚಯಗೊಂಡಿದ್ದರು. ಬಳಿಕ ಯುವತಿಗೆ ವಿವಾಹ ಭರವಸೆ ನೀಡಿ ಎಂಟೂವರೆ ಲಕ್ಷದಷ್ಟು ರೂ.ವನ್ನು ವಸೂಲು ಮಾಡಿ ಮಾನಭಂಗಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಶಮ್ಮಾಸ್ ಈಕೆಯಿಂದ ದೂರ ಉಳಿದಿದ್ದು, ಸಂಬಂಧವನ್ನು ರದ್ದುಗೊಳಿಸಲು ಯತ್ನಿಸಿರುವುದಾಗಿ ಹೇಳಲಾಗಿದೆ. ಇದರಿಂದಾಗಿ ತಾನು ವಂಚನೆಗೊಳಗಾಗಿದ್ದೇನೆಂದು ಯುವತಿಗೆ ತಿಳುವಳಿಕೆ ಮೂಡಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ.

RELATED NEWS

You cannot copy contents of this page