ಹೊಸದುರ್ಗ: ಚೆರುವತ್ತೂರು ಮಟ್ಟಲಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಂಡು ಬಂದಿರುವುದಕ್ಕೆ ಸಂಬಂಧಿಸಿ ತನಿಖಾವರದಿ ಸಲ್ಲಿಸುವುದಕ್ಕಾಗಿ ಜಿಲ್ಲಾಧಿಕಾರಿ ನೇಮಕಗೊಳಿಸಿದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಕಾಞಂಗಾಡ್ ಆರ್‌ಡಿಒರ ಪ್ರತಿನಿಧಿ ಸೀನಿಯರ್ ಸುಪರಿಂಟೆಂಡೆಂಟ್ ಇ.ಎಂ. ಬಿಜು, ಹೊಸದುರ್ಗ ತಹಶೀಲ್ದಾರ್ ಪಿ.ಕೆ. ಪ್ರೇಮಾನಂದ್ ಸಹಿತ ಹಲವು ಉನ್ನತ ಅಧಿಕಾರಿಗಳು ತಂಡದಲ್ಲಿದ್ದರು. ಪಿಲಿಕ್ಕೋಡ್ ಪಂಚಾಯತ್ ಅಧ್ಯಕ್ಷ ಇ. ಕುಂಞಿರಾಮನ್ ಸಮಸ್ಯೆಗಳ ಬಗ್ಗೆ ವಿವರಿಸಿದರು. ಜನಪ್ರತಿನಿಧಿಗಳು, ಕಂಪೆನಿ ಪ್ರತಿನಿಧಿಗಳು ಉಪಸ್ಥಿತರಿದ್ದರು.






