ಬೈಕ್ ಕಂದಕಕ್ಕೆ ಬಿದ್ದು ಸವಾರ ಮೃತ್ಯು

ಕಾಸರಗೋಡು: ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು ಸವಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ನೀಲೇಶ್ವರಕ್ಕೆ ಸಮೀಪದ ಚಾತಮತ್ತ್ ಚುಳ್ಳಿಕ್ಕಾಡ್  ನಿವಾಸಿ ರಾಘವನ್ ಕೆ.ವಿ- ವಸುಮತಿ ದಂಪತಿ ಪುತ್ರ ಕೆ.ವಿ. ಶಿನೋಯ್ (41) ಸಾವಾನಪ್ಪಿದ ದುರ್ದೈವಿ. ಈ ಹಿಂದೆ ಗಲ್ಫ್‌ನಲ್ಲಿ ದುಡಿಯುತ್ತಿದ್ದ ಇವರು ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿ ಇಲ್ಲೇ ದುಡಿಯುತ್ತಿದ್ದರು.

ಶಿನೋಯ್ ನಿನ್ನೆ ಮಧ್ಯಾಹ್ನ ಬೈಕ್‌ನಲ್ಲಿ ಹೋಗುತ್ತಿದ್ದ ದಾರಿ ಮಧ್ಯೆ ನೀಲೇಶ್ವರ ಕರುವಂತಲ ರಸ್ತೆಯ ಚಾತಮತ್‌ನಲ್ಲಿ ಬೈಕ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದು, ದುರ್ಘಟನೆ ನಡೆದಿದೆ. ಅಪಘಾತದ ವೇಳೆ ಶಿನೋಯ್ ಮೊದಲು ಕಂದಕಕ್ಕೆ ಬಿದ್ದಿದ್ದು, ನಂತರ ಬೈಕ್ ಅವರ ದೇಹದ ಮೇಲೆ ಬಿದ್ದಿದೆ. ಅದನ್ನು ಕಂಡ ಊರವರು ತಕ್ಷಣ ಶಿನೋಯ್‌ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಹೆತ್ತವರ ಹೊರತಾಗಿ ಸಹೋದರಿ ಮೆಹ್ನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page