ಪೈವಳಿಕೆ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ನಾಳೆ ಬೆಳಿಗ್ಗೆ ೯ರಿಂದ ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ ೯ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನೀಸ ಸಲೀಂ, ಸೀತಾರಾಮ ಶೆಟ್ಟಿ ಭಂಡಾರಗುತ್ತು ಚಾಲನೆ ನೀಡುವರು. ಬಳಿಕ ಸುಗಮ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ ನಡೆಯಲಿದೆ. ಕರ್ನಾಟಕ ಸರಕಾರದ ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜ ಉದ್ಘಾಟಿ ಸುವರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡುವರು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಗಡಿನಾಡ ಸಾಧಕರನ್ನು ಸನ್ಮಾನಿಸುವರು. ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಪತ್ರಕರ್ತರ ಗುರುತುಚೀಟಿ ವಿತರಿಸುವರು. ಶಾಫಿ ಬಂಡಸಾಲ ದುಬೈ ಇವರ ಮನದ ಮಾತು, ಕಟಪಾಡಿ ಶಿವಾನಂದ ಕೋಟ್ಯಾನ್ ಇವರ ಪರಂಪರೆಯ ಪಯಣ ಪುಸ್ತಕ ಟಿ.ಎಂ. ಶಹೀದ್ ಬಿಡುಗಡೆಗೊಳಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಕ.ಕಾ.ಪ.ಸಂ. ಅಧ್ಯಕ್ಷ ಶಿವಾನಂದ ತಗಡೂರು, ಕರ್ಣ ಬೆಳಿಗೆರೆ, ಎಸ್. ಪ್ರದೀಪ್ ಕುಮಾರ ಕಲ್ಕೂರ, ಯು.ಕೆ. ಸೈಫುಲ್ಲ ತಂಙಳ್ ಸಹಿತ ಹಲವು ಮಂದಿ ಅತಿಥಿಗಳಾಗಿ ಭಾಗವಹಿಸುವರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಗದೀಶ ಮತ್ತು ತಂಡದವರಿಂದ ಪೂಜಾಕುಣಿತ, ಮಮತಾ ಮತ್ತು ತಂಡದವರಿಂದ ಸಮೂಹ ಜಾನಪದ ನೃತ್ಯ, ಗಂಗಾ ಯಶಸ್ವಿನಿ ಮತ್ತು ತಂಡದವರಿಂದ ಸಮೂಹ ಶಾಸ್ತ್ರೀಯ ನೃತ್ಯ, ಮಾರುತಿ ಮತ್ತು ತಂಡದವರಿಂದ ಜಾನಪದ ಕಂಸಾಳೆ ನೃತ್ಯ, ಮರಿಸ್ವಾಮಿ ಮತ್ತು ತಂಡದವರಿಂದ ಕಹಳೆ ವಾದನ, ಜಲಶ್ರೀ ಮತ್ತು ತಂಡದವರಿಂದ ಸಮೂಹ ಭರತನಾಟ್ಯ, ರಂಗನಾಥ ಮಹಿಳಾ ಮತ್ತು ಮಕ್ಕಳ ಸಂಮೃದ್ಧಿ ಸಂಘದವರಿಂದ ನಾಟ್ಯ ವೈಭವ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್‌ನವರಿಂದ ಚೆಂಡೆ ಮೇಳ, ವಿದುಷಿ ಲತಾ ಶಶಿಧರನ್ ಶಿಷ್ಯರಿಂದ ನೃತ್ಯಂ, ಪರಯಂಗಾನಂ ದಫ್ ಸಂಘದಿಂದ ದಫ್‌ಮುಟ್, ಚಿಲಂಬು ಕೊಡವಳದವರಿಂದ ಅಲಾಮಿ ನೃತ್ಯ, ಮಹಾಲಕ್ಷ್ಮಿಪುರಂ ವನಿತಾ ಕೋಲ್ಕಳಿ ಸಂಘದವರಿಂದ ಕೋಲ್ಕಳಿ ಜರಗಲಿದೆ.
ಸಾಧಕರಾದ ಗೋನಾಸ್ವಾಮಿ ಬೆಂಗಳೂರು, ಸಂದೀಪ್ ಪುರಂದರ ಶೆಟ್ಟಿ, ಬಿ.ಎ. ಖಾದರ್ ಹಾಜಿ, ಡಾ. ಶಶಿಧರ ಎಚ್. ದೊಡ್ಡಮನಿ, ಝಹೀಂ ಕುಬಣೂರು, ಮೊಹಮ್ಮದ್ ಝಯಾನ್ ಇಸ್ಮಾಯಿಲ್ ಪಿ. ಇವರನ್ನು ಸನ್ಮಾನಿಸಲಾಗುವುದು. ಬಿ.ಎಂ. ಹನೀಫ್, ಕುರಿಯ ವಾಸುದೇವ ಎಂ. ಹೊಳ್ಳ, ಡಾ. ಯು.ಎಂ. ರವಿ, ಪುಂಡಲೀಕ ಭೀಮಪ್ಪ ಬಾಲೋಜಿ, ವಿಜಯಲಕ್ಷ್ಮಿ ಶಿಬರೂರು, ಎಚ್.ಇ. ರವಿ ಸೋಮವಾರ ಪೇಟೆ, ವಿಶ್ವನಾಥ್ ಬೆಳಗಲ್ ಮಠ ಕೊಪ್ಪಳ, ಪ್ರಕಾಶ್ ಸುವರ್ಣ ಕಟಪಾಡಿ, ದೇವೇಂದ್ರಪ್ಪ ಆವಂಟಿ ಗುಲ್ಬರ್ಗ, ಸತೀಶ್ ಇರಾ, ಸುಭಾಷ್ ಸಿರಿಯ, ಹರೀಶ್ ಮಾಂಬಾಡಿ, ನವೀನ್ ಡಿಸೋಜ ಕೊಡಗು, ಶಂಸುದ್ದೀನ್ ಎಣ್ಮೂರು, ಎ.ಆರ್. ಚಿದಂಬರ ಕೊರಟಗೆರೆ ತುಮಕೂರು, ಕೆ.ಆರ್. ಮಂಜುನಾಥ ಹಾಸನ, ತೆಕ್ಕೇಕರೆ ಶಂಕರನಾರಾಯಣ ಭಟ್, ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡ್ ಇವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.







