ಕಾಸರಗೋಡು: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು ಇದರ ಕೇಂದ್ರ ಸಮಿತಿ ಮಹಾಸಭೆ ಬೀರಂತಬೈಲುನಲ್ಲಿರುವ ಕನ್ನಡ ಅಧ್ಯಾಪಕಭವನದಲ್ಲಿ ನಡೆಯಿತು. ಕೇಂದ್ರ ಸಮಿತಿ ಅಧ್ಯಕ್ಷ ಸುಕೇಶ್ ಎ. ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ಕುಂಬಳೆ ಉಪಜಿಲ್ಲಾ ಅಧ್ಯಕ್ಷ ಹರ್ಷ ಎಂ.ಪಿ., ಬೇಕಲ ಹೊಸದುರ್ಗ ಉಪಜಿಲ್ಲಾ ಸಮಿತಿ ಅಧ್ಯಕ್ಷ ವಿಠಲ ಅಡ್ವಳ, ಕಾಸರಗೋಡು ಉಪಜಿಲ್ಲಾ ಅಧ್ಯಕ್ಷ ಕುಶ ಪಿ.ಎಲ್, ಕಾರ್ಯದರ್ಶಿ ಪೂರ್ಣಿಮ ಎಂ, ಕೋಶಾಧಿಕಾರಿ ಸುರೇಖ ಕೆ. ಮಂಜೇಶ್ವರ, ಉಪಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಎಂ, ಕೋಶಾಧಿಕಾರಿ ಕಿಶೋರ್ ಕುಮಾರ್ ಚರ್ಚೆಯಲ್ಲಿ ಭಾಗವಹಿಸಿದರು. ಕೇಂದ್ರ ಸಮಿತಿ ಉಪಾಧ್ಯಕ್ಷೆ ಶ್ರೀಲತಾ ಕೆ, ಕಾರ್ಯ ದರ್ಶಿಗಳಾದ ಜಯಪ್ರಶಾಂತ್ ಪಾಲೆಂಗ್ರಿ, ಪ್ರದೀಪ್ ಕೆ.ವಿ. ಉಪಸ್ಥಿತರಿ ದ್ದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸುಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಪ್ರದೀಪ್ ಕೆ.ವಿ, ಜೊತೆ ಕೋಶಾಧಿಕಾರಿಯಾಗಿ ಶರತ್ ಕುಮಾರ್ ಎಂ. ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಲತಾ ಕೆ, ಉಮೇಶ್ ಕೆ, ಜಯರಾಮು ಸಿ.ಎಚ್, ಯಶೋಧ, ಜಯಪ್ರಶಾಂತ್ ಪಾಲೆಂಗ್ರಿ, ಡಾ. ಶ್ರೀಶಕುಮಾರ್ ಪಂಜಿತ್ತಡ್ಕ, ಜೀವನ್ ಕುಮಾರ್, ನವೀನ್ ಕುಮಾರ್ ಪಿ, ಸಂಘಟನಾ ಕಾರ್ಯದರ್ಶಿಯಾಗಿ ಜಬ್ಬಾರ್ ಬಿ, ಅಧಿಕೃತ ವಕ್ತಾರನಾಗಿ ಬಾಬು ಕೆ, ಲೆಕ್ಕ ಪರಿಶೋಧಕನಾಗಿ ಪುರುಷೋತ್ತಮ ಕುಲಾಲ್, ಅಬ್ದುಲ್ ರಹಿಮಾನಾ ಆಯ್ಕೆಯಾದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರದೀಪ್ ಕೆ.ವಿ. ವಂದಿಸಿದರು. ಜಯಪ್ರಶಾಂತ್ ಪಾಲೆಂಗ್ರಿ ನಿರೂಪಿಸಿದರು.






