ಒಂದೇ ಪ್ರದೇಶದಲ್ಲಿ ರಾತ್ರಿ ಮೂರು ಲಾರಿಗಳ ಬ್ಯಾಟರಿ ಕಳವು: ಸಮಗ್ರ ತನಿಖೆ ಆರಂಭ

ಕುಂಬಳೆ: ರಸ್ತೆ ಬಳಿ ನಿಲ್ಲಿಸಿದ್ದ ಮೂರು ಲಾರಿಗಳ ಬ್ಯಾಟರಿಗಳನ್ನು ಒಂದೇ ದಿನದಂದು ರಾತ್ರಿ ಕಳ್ಳರು ಕದ್ದು ಸಾಗಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.  ಈ ಬಗ್ಗೆ ಕರ್ನಾಟಕ ರಾಜ್ಯ ನೋಂದಾಯಿತ ಲಾರಿಯೊಂದರ ಮಾಲಕ ಕುಂಬಳೆ ಕೊಯಿಪ್ಪಾಡಿ ನಾರಾಯಣಮಂ ಗಲದ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಬಳಿಯ ಐಶ್ವರ್ಯ ನಿಲಯದ ವಿದ್ಯಾಧರ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಈತಿಂಗಳ 11ರಂದು ರಾತ್ರಿ ನಾರಾಯಣಮಂಗಲ ಶ್ರೀ ಚೀರುಂಬಾ ದೇವಸ್ಥಾನ ಪರಿಸರದಲ್ಲಿ ನಾನು ಲಾರಿ ನಿಲ್ಲಿಸಿದ್ದೆನೆಂದೂ ಮರುದಿನ ೩ ಗಂಟೆಯೊಳಗಿನ ಸಮಯದಲ್ಲಿ ಲಾರಿಯ 13,000  ರೂ. ಮೌಲ್ಯದ ಬ್ಯಾಟರಿ ಕಳವುಗೈಯ್ಯಲ್ಪಟ್ಟಿದೆಯೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿದ್ಯಾಧರ ತಿಳಿಸಿದ್ದಾರೆ.

ಇದೇ ಸ್ಥಳದಿಂದ ಅದೇ ದಿನ ರಾತ್ರಿ ಇತರ ಎರಡು ಲಾರಿಗಳ ಬ್ಯಾಟರಿಗಳನ್ನು ಕಳವುಗೈದು ಸಾಗಿಸಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ. ಆದರೆ ಆ ಬಗ್ಗೆ ದೂರು ಲಭಿಸಿಲ್ಲ ವೆಂದು ಪೊಲೀಸರು ತಿಳಿಸಿದ್ದಾರೆ.

ಕುಂಬಳೆ ಠಾಣೆ ಎಸ್‌ಐ ಸಿ ಸನಿತ್ ನೇತೃತ್ವದ ಪೊಲೀಸರ ತಂಡ ಈ ಬಗ್ಗೆ ತನಿಖೆ  ಆರಂಭಿಸಿದ್ದು, ಇದರಂತೆ ಕಳವು ನಡೆದ ಸ್ಥಳವಾದ ನಾರಾಯಣಮಂಗಲದಿಂದ ಆರಂಭಗೊಂಡು ನಾಯ್ಕಾಪು ಸೇರಿದಂತೆ ಕುಂಬಳೆ ತನಕವಿರುವ ಎಲ್ಲಾ ಅಂಗಡಿಗಳ ಮತ್ತು ಪೆಟ್ರೋಲ್ ಬಂಕ್‌ಗಳ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಿಸಿ ಟಿವಿ ಕ್ಯಾಮರಾದ ದೃಶ್ಯವೊಂದರಲ್ಲಿ ಕಳವು ನಡೆದ ದಿನದಂದು ಕೆಂಪು ಬಣ್ಣದ ಸ್ವಿಫ್ಟ್ ಕಾರು ಸಂಶಯಾಸ್ಪದ ರೀತಿಯಲ್ಲಿ ಸಾಗುತ್ತಿದ್ದ ದೃಶ್ಯ ಪೊಲೀಸರಿಗೆ ಲಭಿಸಿದೆ. ಆ ಹಿನ್ನೆಲೆಯಲ್ಲಿ ಅದರ ಜಾದು ಹಿಡಿದು ಪೊಲೀಸರು ತನಿಖೆ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದೇ ರೀತಿ ದಿನಗಳ ಹಿಂದೆ ಭಾಸ್ಕರನಗರ ಕುಂಬಳೆ ಮತ್ತು ನಾಯ್ಕಾಪುನಿಂದಲೂ ಎgಡು ಲಾರಿಗಳ ಬ್ಯಾಟರಿಗಳನ್ನು ಕದ್ದು ಸಾಗಿಸಿದ್ದಾರೆ.  ಆ ಮೂಲಕ ಕುಂಬಳೆ ಮತ್ತು ಪರಿಸರ ಪ್ರದೇಶದಲ್ಲಿ  ಕಳೆದ ಎರಡು ವಾರದಲ್ಲಿಒಟ್ಟು ೫ ಲಾರಿಗಳ ಬ್ಯಾಟರಿಗಳು ಕಳವಿಗೀಡಾಗಿವೆ.

You cannot copy contents of this page