ಮಂಜೇಶ್ವರ: ಹೊಸಂಗಡಿ ರೈಲ್ವೇಗೇಟ್ ಮುಚ್ಚಿದ ಬಳಿಕ ತೆರೆಯಲು ವಿಳಂಬಗೊಳ್ಳುತ್ತಿ ರುವುದು ವಾಹನ ಸಂಚಾರಕ್ಕೆ ಅಡಚಣೆಗೆ ಕಾರಣವಾಗುತ್ತಿದೆ. ವಾಹನಗಳ ಸರದಿ ಸಾಲು ಹೆದ್ದಾರಿಗೆ ತಲುಪುತ್ತಿರುವುದ ರಿಂದ ಇತರ ವಾಹನ ಸಂಚಾ ರಕ್ಕೆ ಅಡಚಣೆ ಉಂಟಾಗುತ್ತಿದ್ದು, ಮೇಲ್ಸೇತುವೆ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸಿ ದ್ದಾರೆ. ಗೇಟ್ ಮುಚ್ಚಿದ ಬಳಿಕ ತೆರೆಯಲು ಸುಮಾರು 20ನಿಮಿಷಗಳ ಕಾಲ ಬೆೆÃಕಾಗುತ್ತಿದೆ. ಇದರಿಂದ ಹೊಸಂಗಡಿ ಪೇಟೆಯಿಂದ ಬಂಗ್ರಮAಜೇಶ್ವರ ಭಾಗಗಳಿಗೆ ತೆರಳಬೇಕಾದ ವಾಹನಗಳ ಸಾಲು ಹೆದ್ದಾರಿ ತನಕ ತಲುಪುತ್ತಿದೆ.
ಇದು ಹೆದ್ದಾರಿಯಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಹೆದ್ದಾರಿ ಅಭಿವೃದ್ದಿಯಿಂದ ರೈಲ್ವೇ ಗೇಟ್ ಬಳಿಯಲ್ಲಿ ವಾಹನ ನಿಲುಗಡೆಗೆ ಸ್ಥಳದ ಕೊರತೆ ಉಂಟಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ದಿನದಲ್ಲಿ ಹಲವಾರು ಬಾರಿ ಗೇಟ್ ಮುಚ್ಚಲಾಗುತ್ತಿದೆ. ಕೆಲವೊಮ್ಮೆ ವಿಳಂಬವಾಗುತ್ತಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಹೊಸಂಗಡಿ ರೈಲ್ವೇ ಗೇಟ್‌ನಲ್ಲಿ ಮೇಲ್ಸೇತುವೆ ಸಾರ್ವ ಜನಿಕರ ಹಲವಾರು ವರ್ಷಗಳ ಕನಸಾಗಿದೆ. ಸಂಬAಧಪಟ್ಟ ಅಧಿಕಾರಿ ವರ್ಗ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





