ಮಂಜೇಶ್ವರ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ತಾಲೂಕು ಸಂಗಮ ನಾಳೆ ಬೆಳಿಗ್ಗೆ ೧೦ಕ್ಕೆ ಕುಂಬಳೆ ಜಿಎಸ್‌ಬಿಎಸ್ ಯುಪಿ ಶಾಲೆಯಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ. ಪ್ರಭಾಕರನ್ ಉದ್ಘಾಟಿಸುವರು. ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಕೆ. ಅಧ್ಯಕ್ಷತೆ ವಹಿಸುವರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರ ಎಂ. ಶ್ರದ್ಧಾಂಜಲಿ ಠರಾವು ಮಂಡಿಸುವರು. ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತ ಸಿ.ಎಚ್. ಮುಖ್ಯ ಅತಿಥಿಯಾಗಿರುವರು. ತಾಲೂಕು ಲೈಬ್ರರಿ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಗೆ ಇಬ್ಬರು ಪ್ರತಿನಿಧಿಗಳ ಆಯ್ಕೆಗಾಗಿ ಚುನಾವಣೆ ಈ ವೇಳೆ ನಡೆಯಲಿದೆ. ತಾಲೂಕು ಕಾರ್ಯದರ್ಶಿ ಕಮಲಾಕ್ಷ ಡಿ. ವಾರ್ಷಿಕ ವರದಿ, ರಾಜ್ಯ ಸಮಿತಿ ಸದಸ್ಯ ದಾಸಪ್ಪ ಶೆಟ್ಟಿ ರಾಜ್ಯ ಸಮಿತಿ ವರದಿ ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ ಬಷೀರ್ ಕೊಟ್ಟುಡಲ್ ಜಿಲ್ಲಾ ವರದಿ ಮಂಡಿಸುವರು. ಕಿಶೋರ್ ಪಾವಳ ಆಯ-ವ್ಯಯ, ವನಿತಾ ಆರ್. ಶೆಟ್ಟಿ ಆಡಿಟ್ ವರದಿ ಮಂಡಿಸುವರು. ಪ್ರೇಮಾ ಎಸ್. ರೈ, ಮನೋಜ್ ಕುಮಾರ್ ಭಾಗವಹಿಸುವರು.







