ಕೊಚ್ಚಿ: ಹುಲಿಯ ಹಲ್ಲು ವಶಪಡಿಸಿದ ಪ್ರಕರಣದಲ್ಲಿ ರಾಪರ್‌ವೇಡನ್‌ಗೆ ತಿರುಗೇಟು ಲಭಿಸಿದೆ. ವಶಪಡಿಸಿರುವುದು ನಿಜವಾದ ಹುಲಿಹಲ್ಲು ಆಗಿದೆ ಎಂದು ಖಚಿತಪಡಿಸಲಾಗಿದೆ. ಕೊಲ್ಕತ್ತದ ಜುವೋಲಜಿ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಹುಲಿ ಹಲ್ಲು ಎಂದು ಖಚಿತಪಡಿಸಲಾಗಿದೆ. ಪ್ರಕರಣದಲ್ಲಿ ಆರಣ್ಯ ಇಲಾಖೆ ಕೂಡಲೇ ದೋಷಾರೋಪ ಪಟ್ಟಿ ಸಲ್ಲಿಸಲಿದೆ. ಅನಧಿಕೃತವಾಗಿ ಹುಲಿ ಹಲ್ಲು ಕೈವಶವಿರಿಸಿಕೊಂಡಿರುವುದಕ್ಕೆ, ಮೃಗ ಬೇಟೆ ನಡೆಸಿರುವುದಾಗಿ ಆರೋಪಿಸಿ ವೇಡನ್ ವಿರುದ್ಧ ಈ ಮೊದಲೇ ಅರಣ್ಯ ಇಲಾಖೆ ಕೇಸು ದಾಖಲಿಸಿತ್ತು. ಆದರೆ ನಿಜವಾದ ಹುಲಿ ಹಲ್ಲು ಅಲ್ಲವೆಂದು ತಮಿಳುನಾಡಿನಿಂದ ಅಭಿಮಾನಿಯೋರ್ವ ಕೊಡುಗೆಯಾಗಿ ನೀಡಿರುವುದಾಗಿಯೂ ವೇಡನ್ ಹೇಳಿಕೆ ನೀಡಿದ್ದನು. ಆದರೆ ಅದಕ್ಕೂ ಮೊದಲು ಥಾಲ್ಯಾಂಡ್‌ನಿಂದ ಖರೀದಿಸಿರುವುದಾಗಿ ತಿಳಿಸಿದ್ದನು. ಕೊಚ್ಚಿಯ ಪ್ಲ್ಯಾಟ್‌ನಿಂದ ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಹಿರಣ್‌ದಾಸ್ ಮುರಳಿ ಎಂಬ ರಾಪರ್‌ವೇಡನ್ ಪ್ರಥಮವಾಗಿ ಸೆರೆಯಾಗಿದ್ದಾನೆ. ಪ್ರಸ್ತುತ ಸಮಯದಲ್ಲಿ ಹುಲಿಯ ಹಲ್ಲು ಅಡಕಗೊಳಿಸಿದ್ದ ಲಾಕೆಟ್ ಈತನಿಂದ ಪತ್ತೆಹಚ್ಚಲಾಗಿದೆ. ಬಳಿಕ ಈ ಕೇಸನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು.







