ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಕುಂಬಳೆ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ತಲೆಮರೆಸಿಕೊಂಡಿದ್ದಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಶಿವಮೊಗ್ಗ ನಿವಾಸಿ ಹಲೀಸ್ ನಾಯ್ಕ್ (45) ಬಂಧಿತ ಆರೋಪಿಯಾಗಿದ್ದಾನೆ. 2019ರಲ್ಲಿ ಈತ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಅಂದು ಈತ ಕುಂಬಳೆ ಮುಟ್ಟಂನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದನು. ಪ್ರಕರಣದಲ್ಲಿ ಸೆರೆಗೀಡಾದ ಹಲೀಸ್ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ವಿಚಾರಣೆ ವೇಳೆ ತಲೆಮರೆಸಿಕೊಂಡಿದ್ದನು. ಇದರಿಂದ ಈತನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು.

ಇದೀಗ ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್,  ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಕಿಶೋರ್, ಪ್ರಶಾಂತ್ ಎಂಬಿವರು ಕರ್ನಾಟಕದ ಶಿವಮೊಗ್ಗದಿಂದ ಹಲೀಸ್ ನಾಯ್ಕ್‌ನನ್ನು ಬಂಧಿಸಿದ್ದಾರೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ.

You cannot copy contents of this page