ಕುಂಬಳೆ: ಕುಂಬಳೆ, ಬಂದ್ಯೋಡು ಮೊದಲಾದೆಡೆಗಳನ್ನು ಕೇಂದ್ರೀಕರಿಸಿ ಭಾರೀ ಪ್ರಮಾಣದಲ್ಲಿ ಸಮಾಂತರ ಲಾಟರಿ ವ್ಯಾಪಾರ ನಡೆಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂದ್ಯೋಡಿನ ಮಂಜುನಾಥ, ಪುತ್ರ ಕಿಶನ್ ಕುಮಾರ್, ಕುಂಬಳೆ ಕೊಯಪ್ಪಾಡಿ ಶಾಂತಿಪಳ್ಳದ ಸರಣ್ ಕುಮಾರ್ ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಇವರ ಕೈಯಿಂದ ಸಮಾಂತರ ಲಾಟರಿಯ ನಂಬ್ರಗಳನ್ನು ಬರೆದ ಕಾಗದಗಳು, ಅವುಗಳನ್ನು ಮಾರಾಟಗೈದು ಲಭಿಸಿದ ೬೨೮೦ ರೂಪಾಯಿ, ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ಸಮಾಂತರ ಲಾಟರಿ ಮಾರಾಟಗಾರರ ಹೆಸರುಗಳು, ಅವರು ತೆಗೆದ ಸಮಾಂತರ ಲಾಟರಿ ನಂಬ್ರಗಳು ಮೊದಲಾದವುಗಳನ್ನು ಮೊಬೈಲ್ನ ಪ್ರತ್ಯೇಕ ಆಪ್ಗಳಲ್ಲಿ ಪತ್ತೆಹಚ್ಚಲಾಗಿದೆ.
ಕುಂಬಳೆ ಎಸ್ಐ ಅನಂತಕೃಷ್ಣನ್ ಆರ್ ಮೆನೋನ್ಗೆ ಲಭಿಸಿದ ಗುಪ್ತ ಮಾಹಿತಿ ಮೇರೆಗೆ ಪೊಲೀಸರು ಮೊನ್ನೆ ಬಂದ್ಯೋಡಿನಲ್ಲಿ ಕಾರ್ಯಾಚರಣೆ ನಡೆಸಿದ್ದರು. ಅಲ್ಲಿ ಪೆರ್ಮುದೆ ರಸ್ತೆ ಜಂಕ್ಷನ್ನಲ್ಲಿದ್ದ ಮಂಜುನಾಥ,
ಕಿಶನ್ ಕಮಾರ್ರ ಬಳಿಗೆ ಓರ್ವ ತಲುಪಿ ಏನೋ ಮಾತನಾಡಿದ ಬಳಿಕ ಹಣನೀಡಿ ಬಳಿಕ ಕಾಗದದ ತುಂಡು ಪಡೆದು ಮರಳುವಷ್ಟರಲ್ಲಿ ಪೊಲೀಸರ ವಾಹನ ಅವರ ಬಳಿಗೆ ತಲುಪಿದೆ. ಈ ವೇಳೆ ಕಾಗದದ ತುಂಡು ಪಡೆದ ವ್ಯಕ್ತಿ ಓಡಿ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಮಂಜುನಾಥ ಹಾಗೂ ಕಿಶನ್ ಕುಮಾರ್ರನ್ನು ಪೊಲೀಸರು ತನಿಖೆಗೊಳಪಡಿಸಿದರೂ ಸ್ಪಷ್ಟ ಉತ್ತರ ಲಭಿಸಿಲ್ಲ. ಇದರಿಂದ ದೇಹ ತಪಾಸಣೆ ನಡೆಸಿದಾಗ ಕಿಶೋರ್ರ ಕೈಯಿಂದ ಒಂದು ಫೋನ್, ಹಣ,ಸಂಖ್ಯೆಗಳನ್ನು ಬರೆದ ಕಾಗದದ ತುಂಡುಗಳು ಒಳಗೊಂಡ ಬ್ಯಾಗ್ ಪತ್ತೆಯಾಗಿದೆ. ಈ ಬಗ್ಗೆ ನಡೆಸಿದ ಸಮಗ್ರ ತನಿಖೆಯಲ್ಲಿ ಸಮಾಂತರಲಾಟರಿ ವ್ಯವಹಾರವೆಂದು ತಿಳಿದುಬಂದಿದೆ. ಅನಂತರ ಪೊಲೀಸರು ಫೋನ್ ತಪಾಸಣೆ ನಡೆಸಿದಾಗ ಸಮಾಂತರ ಲಾಟರಿ ವಂಚನೆ ತಂಡದ ಮುಖ್ಯಸ್ಥ ನಾದ ಶಾಂತಿಪಳ್ಳದ ನಿವಾಸಿಸರಣ್ ಕುಮಾರ್ನ್ನು ಪತ್ತೆಹಚ್ಚಲಾಗಿದೆ. ಅನಂತರ ಈತನನ್ನು ಠಾಣೆಗೆ ಬರುವಂತೆ ತಿಳಿಸಿ ಬಂಧಿಸಲಾಗಿದೆ. ಜಿಲ್ಲೆಯ ವಿವಿಧೆಡೆಗಳಲ್ಲಿ ಈ ರೀತಿಯಲ್ಲಿ ಅನಧಿಕೃತ ಸಮಾಂತರ ಲಾಟರಿ ದಂಧೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವುದಾಗಿ ದೂರುಗಳು ಕೇಳಿಬಂದಿದೆ. ಕೇರಳ ಲಾಟರಿಯ ಪ್ರತೀ ದಿನದ ಡ್ರಾದಲ್ಲಿ ಪ್ರಥಮ ಬಹುಮಾನ ಲಭಿಸುವ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳು ವ್ಯಕ್ತಿಗಳು ಪಡೆಯುವ ಕಾಗದದ ತುಂಡಿನಲ್ಲಿರುವ ಸಂಖ್ಯೆಗಳಿಗೆ ಲಭಿಸಿದರೆ 5000 ರೂಪಾಯಿ ನೀಡಲಾಗುತ್ತದೆ. ಅಲ್ಲದೆ ಇತರ ಬಹುಮಾನಗಳು ಇವೆ. ಈ ರೀತಿಯಲ್ಲಿ ದಿನಂಪ್ರತಿ ತಂಡಗಳು ಲಕ್ಷಾಂತರ ರೂಪಾಯಿಗಳನ್ನು ವ್ಯಕ್ತಿಗಳಿಂದ ಲಪಟಾಯಿಸುತ್ತಿ ದ್ದಾರೆಂದು ಆರೋಪಗಳು ಕೇಳಿ ಬ ರುತ್ತಿದೆ.






