ಐಕ್ಯರಂಗ ಸರಕಾರ ಆಡಳಿತಕ್ಕೆ: ಮಂಜೇಶ್ವರ ತಾಲೂಕು ಆಸ್ಪತ್ರೆಗೆ ಜಿ.ಪಂ. ಸದಸ್ಯೆಯಿಂದ 10 ಲಕ್ಷ ರೂ.ಗಳ ಮೆಶೀನ್ ಕೊಡುಗೆ

ಉಪ್ಪಳ: ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪ್ರಮಾಣವಚನಗೈದ ಹಿನ್ನೆಲೆಯಲ್ಲಿ ಸಂತೋಷವನ್ನು ಹಂಚಿಕೊಂಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನ ಇಕ್ಬಾಲ್ ಮಂಜೇಶ್ವರ ತಾಲೂಕು ಆಸ್ಪತ್ರೆಗೆ ಕ್ಯಾನ್ಸರ್ ಡಿಟಾಕ್ಷನ್ ಹಾರ್ಮೋನ್ ಮೆಶೀನ್‌ನ್ನು ಉಚಿತವಾಗಿ ನೀಡಿ ಮಾದರಿಯಾದರು. 10 ಲಕ್ಷ ರೂ. ಮೌಲ್ಯದ ಈ ಅತ್ಯಾಧುನಿಕ ಕ್ಯಾನ್ಸರ್ ನಿರ್ಣಯ ಮೆಶೀನ್‌ನಲ್ಲಿ ಹಲವಾರು ಹಾರ್ಮೋನ್ ಟೆಸ್ಟ್‌ಗಳನ್ನು ನಿಮಿಷಗಳೊಳಗೆ ಮಾಡಲು ಸಾಧ್ಯವಿದೆ.

ಥೈರಾಯ್ಡ್, ಗರ್ಭಕಾಲದ ಸ್ತ್ರೀಯರಿಗೆ ಮಾಡುವ ಹಾರ್ಮೋನ್ ಟೆಸ್ಟ್‌ಗಳು, ಕ್ಯಾನ್ಸರ್ ಟೆಸ್ಟ್‌ಗಳ ಸಹಿತ ಹಲವಾರು ಟೆಸ್ಟ್‌ಗಳನ್ನು ಇದರಲ್ಲಿ ಮಾಡಬಹುದಾಗಿದೆ. ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲೋಕ್ ಪಂ. ಅಧ್ಯಕ್ಷ ಸೈಫುಲ್ಲ ತಂಙಳ್, ಮುಸ್ಲಿಂ ಲೀಗ್ ಮಂಡಲ ಅಧ್ಯಕ್ಷ ಅಸೀಸ್ ಮರಿಕ್ಕ ಜಂಟಿಯಾಗಿ ಮೆಶೀನ್ ಸ್ವೀಕರಿಸಿದರು. ಮಂಗಲ್ಪಾಡಿ ಪಂಚಾಯತ್ ಉಪಾಧ್ಯಕ್ಷೆ ಶಮೀನಾ ಟೀಚರ್, ಪೂಕಲ್ ಬಾಲಕೃಷ್ಣನ್, ಮೆಹಮ್ಮೂದ್ ಕೈಕಂಬ, ಬದ್ರುದ್ದೀನ್ ಕೆ. ಭಾಗವಹಿಸಿದರು.

RELATED NEWS

You cannot copy contents of this page