ಹಿರಿಯ ಕೃಷಿಕ ನಿಧನ

ಉಪ್ಪಳ: ಮಂಗಲ್ಪಾಡಿ ಪಂಜಗುತ್ತು ನಿವಾಸಿ, ಹಿರಿಯ ಕೃಷಿಕ ದೂಮಣ್ಣ ಶೆಟ್ಟಿ (90) ನಿನ್ನೆ ನಿಧನ ಹೊಂದಿದರು. ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಸೇವಾ ಸಮಿತಿಯಲ್ಲಿ ೩೫ ವರ್ಷ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪಂಜಗುತ್ತು ತರವಾಡಿನ ಹಿರಿಯರಾಗಿದ್ದಾರೆ.

ಇವರ ಪತ್ನಿ ಮುತ್ತಕ್ಕೆ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಹೇಮರಾಜ್ ಶೆಟ್ಟಿ, ಸೋಮನಾಥ ಶೆಟ್ಟಿ, ವಿಮಲ, ಉಮಾವತಿ, ಪದ್ಮಾವತಿ, ಸೊಸೆಯಂ ದಿರಾದ ನವ್ಯ, ವಿದ್ಯಾ, ಅಳಿಯಂದಿರಾದ ಚಂದ್ರಹಾಸ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ ಶೆಟ್ಟಿ, ಸಹೋದರ- ಸಹೋದರಿ ಯರಾದ ನಂದಪ್ಪ ಶೆಟ್ಟಿ, ಕಿಂಞಣ್ಣ ಶೆಟ್ಟಿ, ಸುಂದರಿ, ಲೀಲಾವತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page