ಹಂಗಾಮಿ ಸ್ಪೀಕರ್ ಆಗಿ ಜಿ. ಸುಧಾಕರನ್ ಪ್ರಮಾಣವಚನ ಸ್ವೀಕಾರ: ಖಾತೆ ಹಂಚಿಕೆ ಬಿಕ್ಕಟ್ಟಿಗೆ ಕೊನೆಗೂ ಪರಿಹಾರ

ತಿರುವನಂತಪುರ: ಕೇರಳದ ೧೬ನೇ ವಿಧಾನಸಭೆಯ ಮೊದಲ ಅಧಿವೇಶನ ನಾಳೆ ಆರಂಭಗೊಳ್ಳಲಿ ರುವಂತೆಯೇ ಯುಡಿಎಫ್ ಬೆಂಬಲಿತ ಅಭ್ಯರ್ಥಿ ಯಾಗಿ ಗೆಲುವು ಸಾಧಿಸಿದ ಹಿರಿಯ ರಾಜಕಾರಣಿ ಜಿ. ಸುಧಾಕ ರನ್ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.

ಲೋಕ್ ಭವನದಲ್ಲಿ ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್    ಅವರು ಜಿ. ಸುಧಾಕರನ್‌ರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದರು.

ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ನಿಯುಕ್ತ ಶಾಸಕರು ನಾಳೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯ ಸರಕಾರ ತನ್ನ ಹೊಸ ನೀತಿಯನ್ನು ಮೇ ೨೯ರಂದು ಪ್ರಕಟಿಸಲಿದೆ. ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿರುವ ಜಿ. ಸುಧಾಕರನ್ ಸಿಪಿಎಂನ ಹಿರಿಯ ನೇತಾರರೂ ಆಗಿದ್ದರು. ಬಳಿಕ ಪಕ್ಷದಲ್ಲಿ ತನ್ನನ್ನು ಕಡೆಗಣಿಸುತ್ತಿರುವುದರಿಂದ ಸಿಡಿದೆದ್ದ ಅವರು ಸಿಪಿಎಂ ನಿಂದ ಹೊರಬಂದು ಈ ಚುನಾವಣೆಯಲ್ಲಿ ಯುಡಿಎಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.  ವಿಶೇಷವೇನೆಂದರೆ ಮೇ 21ರಂದು ನಡೆಯಲಿರುವ  ವಿಧಾನಸಭಾ ಅಧಿವೇ ಶನದಲ್ಲಿ   ಪಿಣರಾಯಿ ವಿಜಯನ್ ಸೇರಿದಂತೆ ಸಿಪಿಎಂನ ಎಲ್ಲಾ ನಿಯುಕ್ತ ಶಾಸಕರು ಜಿ. ಸುಧಾಕರನ್‌ರಿಂದಲೇ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಬೇಕಾಗಿ ಬರಲಿದೆ.

ಸಚಿವಸಂಪುಟದಲ್ಲಿ ಕಳೆದ ಮೂರು ದಿನಗಳ ಕಾಲದಿಂದ ಕಗ್ಗಂಟಾಗಿ ತಲೆಯೆತ್ತಿದ್ದ ಖಾತೆ ಹಂಚಿಕೆ ಸಮಸ್ಯೆಗೆ ಕೊನೆಗೂ ಪರಿಹಾರವುಂಟಾಗಿದೆ.  ಸಚಿವರಿಗೆ ಖಾತೆ ಹಂಚಿಕೆ ನಡೆಸಿದ ವರದಿಯನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ರಾಜ್ಯಪಾಲ  ರಾಜೇಂದ್ರ ಅರ್ಲೇಕರ್‌ರಿಗೆ ಇಂದು ಬೆಳಿಗ್ಗೆ ಸಲ್ಲಿಸಿದ್ದಾರೆ. ರಮೇಶ್ ಚೆನ್ನಿತ್ತಲರಿಗೆ ಗೃಹ ಮತ್ತು ವಿಜಿಲೆನ್ಸ್ ಖಾತೆಯನ್ನು ವಹಿಸಿಕೊಡಲಾಗಿದೆ. ಕೆ. ಮುರಳೀಧರನ್‌ರಿಗೆ  ಆರೋಗ್ಯ, ಟಿ. ಸಿದ್ದಿಕ್‌ಗೆ ಕೃಷಿ,  ಪಿ.ಕೆ. ಕುಂಞಾಲಿಕುಟ್ಟಿಯವರಿಗೆ ಉದ್ದಿಮೆ ಮತ್ತು ಐಟಿ ಖಾತೆ ಯನ್ನು ವಹಿಸಿಕೊಡಲಾಗಿದೆ.  ರೋಜಿ ಎಂ ಜೋಸ್‌ರಿಗೆ  ಉನ್ನತ ಶಿಕ್ಷಣ, ಎಂ. ಲಿಜು ಅವರಿಗೆ  ಅಬಕಾರಿ ಮತ್ತು ಸಹಕಾರಿ ಖಾತೆ ವಹಿಸಿಕೊಡಲಾಗಿದೆ. ಇತರ ಸಚಿವರುಗಳಿಗೆ ನೀಡಲಾದ ಖಾತೆಗಳ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ.

You cannot copy contents of this page