ಕಾಸರಗೋಡಿನ ರೈಲ್ವೇ ಪ್ರಯಾಣಿಕರ ಸಂಕಷ್ಟ ಪರಿಹರಿಸಲು ಜಿಲ್ಲಾಡಳಿತದ ಮಾಸ್ಟರ್‌ಪ್ಲಾನ್

ಕಾಸರಗೋಡು: ಕಾಸರಗೋಡಿ ನವರ ರೈಲ್ವೇ ಪ್ರಯಾಣ ಸಮಸ್ಯೆ ಪರಿಹ ರಿಸುವುದಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರೈಲ್ವೇಗೆ ಸಮಗ್ರ ನಿರ್ದೇಶ ಅಡಕವಾದ ವರದಿಯನ್ನು ಹಸ್ತಾಂತರಿಸಿ ದ್ದಾರೆ. ಕಣ್ಣೂರು, ಮಂಗಳೂರು ಸೆಂ ಟ್ರಲ್, ಮಂಗಳೂರು ಜಂಕ್ಷನ್ ಎಂಬೆ ಡೆಗಳಲ್ಲಿ ಸಂಚಾರ ಕೊನೆಗೊಳಿಸುವ ಪ್ರಧಾನ ರೈಲುಗಳನ್ನು ಕಾಸರಗೋಡಿಗೂ ಮುಂದುವರಿಸಬೇಕೆಂದು, ನಿಲುಗಡೆ ಗೊಳಿಸಿದ ಪ್ಯಾಸೆಂಜರ್ ಸರ್ವೀಸ್ ಗಳನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಪತ್ರ ರವಾನಿಸಿದ್ದಾರೆ.

ಪಾಲಕ್ಕಾಡ್ ಡಿವಿಶನಲ್ ರೈಲ್ವೇ ಮೆನೇಜರ್ ಮಧುಕರ್ ರಾವತ್‌ರಿಗೆ ಕಳುಹಿಸಿದ ಪತ್ರದಲ್ಲಿ ಕಾಸರಗೋಡು ಜಿಲ್ಲೆ ಎದುರಿಸುವ ತೀವ್ರ ಪ್ರಯಾಣ ಸಂಕಷ್ಟದ ಬಗ್ಗೆ ಜಿಲ್ಲಾಧಿಕಾರಿ ವಿವರಿಸಿದ್ದಾರೆ. ತೆಂಕಣ ಕೇರಳದಿಂದ ಹೊರಡುವ ಹಲವಾರು ರೈಲುಗಳು ಕಣ್ಣೂರಿನಲ್ಲಿ ಸಂಚಾರ ಕೊನೆಗೊಳಿ ಸುತ್ತಿವೆ. ಅದೇ ರೀತಿ ಉತ್ತರ-ಪಶ್ಚಿಮ ವಲಯಗಳಿಂದ ಸಂಚಾರ ಆರಂಭಿಸುವ ರೈಲುಗಳು ಮಂಗಳೂರಿನಲ್ಲಿ ಸಂಚಾರ ಕೊನೆಗೊಳಿಸುತ್ತಿವೆ. ಇದರಿಂದಾಗಿ ಕಾಸರಗೋಡಿಗೆ ತಲುಪಬೇಕಾದ ಪ್ರಯಾಣಿಕರು, ವಿದ್ಯಾರ್ಥಿಗಳು, ರೋಗಿ ಗಳು, ತೀರ್ಥಾಟಕರು ಸಹಿತವಿರುವವರು ಮಧ್ಯರಾತ್ರಿ ಹಾಗೂ ಮುಂಜಾನೆ ಸಮಯಗಳಲ್ಲಿ ಗಂಟೆಗಳ ಕಾಲ ರೈಲು ಇಲ್ಲದೆ ನಿಲ್ದಾಣಗಳಲ್ಲಿ ಕಾಯಬೇಕಾಗಿ ಬರುತ್ತಿದೆ. ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಪ್ರಧಾನ ರೈಲುಗಳಿಗೆ ನಿಲುಗಡೆ ಇಲ್ಲದಿರುವುದು, ಈ ಹಿಂದೆ ಇದ್ದ ಕೆಲವು ಪ್ಯಾಸೆಂಜರ್ ಸರ್ವೀಸ್ ಗಳನ್ನು ನಿಲುಗಡೆಗೊಳಿಸಿರುವುದು ಜನರ ದೈನಂದಿನ ಪ್ರಯಾಣಗಳನ್ನು, ಸ್ಥಳೀಯ ಅಭಿವೃದ್ಧಿಗೆ ತೊಂದರೆ ಉಂಟುಮಾಡಿದೆ. ಮೇ ೧೬ರಂದು ಜಿಲ್ಲಾಧಿಕಾರಿ ಚೇಂಬರ್‌ನಲ್ಲಿ ನಡೆದ ರೈಲ್ವೇ ಅಧಿಕಾರಿಗಳ, ಜಿಲ್ಲಾ ಮಟ್ಟದ ಉದ್ಯೋಗಸ್ಥರ ಸಭೆಯ ತೀರ್ಮಾನಗಳ ಆಧಾರದಲ್ಲಿ ಪಾಲಕ್ಕಾಡ್ ಡಿವಿಶನಲ್ ಮೆನೇಜರ್‌ಗೆ ನಿರ್ದೇಶಗಳನ್ನು ಸಲ್ಲಿಸಲಾಗಿದೆ.

ಕಣ್ಣೂರಿನಲ್ಲೂ, ಮಂಗಳೂ ರಿನಲ್ಲೂ ಸಂಚಾರ ಕೊನೆಗೊಳಿಸುವ ಪ್ರಧಾನ ರೈಲುಗಳನ್ನು ಕಾಸರಗೋಡಿಗೆ ಮುಂದುವರಿಸಬೇಕು, ಪ್ರಸ್ತುತ ನಿಲುಗಡೆಯಿಲ್ಲದ ಪ್ರಧಾನ ರೈಲುಗಳಿಗೆ ಕಾಸರಗೋಡಿನಲ್ಲಿ ನಿಲುಗಡೆ ಮಂಜೂರು ಮಾಡಬೇಕು, ಕಾಸರಗೋಡು ಸ್ಟೇಷನ್‌ನ ಪ್ಲಾಟ್‌ಫಾರ್ಮ್/ ಆಪರೇಶನಲ್ ಪರಿಮಿತಿಗಳನ್ನು ಪರಿಹರಿಸುವುದಕ್ಕಿರುವ ಪ್ರಾಯೋಗಿಕ ನಿರ್ದೇಶವನ್ನು ಜಿಲ್ಲಾಧಿಕಾರಿ ಮುಂದಿರಿಸಿದ್ದಾರೆ. ಬೈಂದೂರು- ಕಾಸರಗೋಡು ಪ್ಯಾಸೆಂಜರ್ ಪುನರಾರಂಭಿಸಬೇಕು, ಕಣ್ಣೂರು -ಕಲ್ಲಿಕೋಟೆ- ಮಂಗಳೂರು ಪ್ಯಾಸೆಂಜರ್ ರೈಲನ್ನು ಪುನರ್ ಕ್ರಮೀಕರಿಸಬೇಕು, ಗುರುವಾಯೂರು- ಮೂಕಾಂಬಿಕಾ ಎಕ್ಸ್‌ಪ್ರೆಸ್ ಆಗಿ ರೈಲು ಸಂಚಾರ ಏರ್ಪಡಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

You cannot copy contents of this page