ನಿವೃತ್ತ ಸೇಲ್ ಟ್ಯಾಕ್ಸ್ ಆಫೀಸರ್ ವಿಶ್ವನಾಥ ಎ ನಿಧನ

ಕಾಸರಗೋಡು: ಕಾಸರಗೋಡು ಕರಂದಕ್ಕಾಡ್ ಉಮಾ ನರ್ಸಿಂಗ್ ಹೋಂ ರಸ್ತೆ ಬಳಿಯ ವಿವೇಕ್ ವಿಹಾರದ  ದಿವಂಗತರಾದ ಶಂಕರ ಸುವರ್ಣ-ಯಮುನ ದಂಪತಿ ಪುತ್ರ ನಿವೃತ್ತ ಸೇಲ್ಸ್ ಟ್ಯಾಕ್ಸ್ ಅಧಿಕಾರಿ  ವಿಶ್ವನಾಥ ಎ (73) ನಿನ್ನೆ ನಿಧನ ಹೊಂ ದಿದರು. ಇವರು ಈ ಹಿಂದೆ ಕನ್ನಿ ಹಿತ್ತಿಲು ಮಲರಾಯ ಧೂಮಾವತಿ ದೈವಸ್ಥಾನದ  ಅಧ್ಯಕ್ಷರಾಗಿದ್ದರು. ಮೃತರು  ಪತ್ನಿ ವೇದಾವತಿ, ಮಕ್ಕಳಾದ ವಿವೇಕ್ (ಇಂಜಿನಿಯರ್ ರಷ್ಯಾ), ವಿಜೇತ, ಅಳಿಯ ಸುಬಿತ್ (ಇಬ್ಬರು ಇಂಜಿನಿಯರ್ ಬೆಂಗಳೂರು), ಸಹೋದರ-ಸಹೋದರಿ ಯರಾದ ಲಕ್ಷ್ಮೀಶ, ಅಜಿತ್ ಕುಮಾರ್, ಪ್ರೇಮಾಜಿತ್, ಚಂದ್ರಕಾಂತ, ವಾರಿ ಜಾಕ್ಷಿ, ವಿಶಾಲಾಕ್ಷಿ, ಚಿತ್ರಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಇನ್ನೋರ್ವಸಹೋದರ ಜಯಂತ ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page