ಮಂಜೇಶ್ವರ ಸಮುದ್ರ ತೀರದಲ್ಲಿ ಒಣಗಿದ ಮರದಿಂದ ಅಪಾಯ ಭೀತಿ

ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿರುವ ಓಷನ್ ವಾಟರ್ ಪಾರ್ಕ್ನ ಮುಂಭಾಗದಲ್ಲಿರುವ ಬೃಹತ್ ಮರ ಯಾವುದೇ ಕ್ಷಣದಲ್ಲಿ ಧರೆಗುರುಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಣಗಿದ ಈ ಮರ ಭಾರಿ ಅನಾಹುತಕ್ಕೆ ಕಾರಣವಾಗಬಹುದೆಂದು ಸ್ಥಳೀಯರು ಮತ್ತು ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ. ವಾಟರ್ ಪಾರ್ಕ್ನ ಎದುರಿನ ಸಣ್ಣ ಅಂಗಡಿ ಸಮೀಪವೇ ಈ ಮರವಿದ್ದು, ಪ್ರತಿದಿನ ಸಂಜೆಯ ವೇಳೆ ಕಡಲ ತಂಗಾಳಿಯನ್ನು ಸವಿಯಲು ಮತ್ತು ಸಮಯ ಕಳೆಯಲು ನೂರಾರು ಜನರು ಇಲ್ಲಿಗೆ ಬರುತ್ತಾರೆ. ಜನನಿಬಿಡ ಪ್ರದೇಶವಾಗಿರುವುದರಿಂದ ಈ ಮರ ಯಾವುದೇ ಸಮಯದಲ್ಲಿ ದೊಡ್ಡ ದುರಂತಕ್ಕೆ ಕಾರಣ ವಾಗಬಹುದು ಎನ್ನಲಾಗುತ್ತಿದೆ. ಈ ವಿಷಯವು ಗಮನಕ್ಕೆ ಬಂದಿದ್ದರೂ ಸಂಬAಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅನಾಹುತ ಸಂಭವಿಸುವ ಮುನ್ನವೇ ಪಂಚಾಯತ್ ಆಡಳಿತ ಎಚ್ಚೆತುಕ್ಕೆÆಂಡು, ಅಪಾಯಕಾರಿ ಮರವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುರಕ್ಷತೆ ಯನ್ನು ಖಾತರಿಪಡಿಸಬೇಕೆಂದು ಸ್ಥಳೀಯರು ಮತ್ತು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

You cannot copy contents of this page