ಕೊಲ್ಲಂಗಾನ: ಮಧೂರು ಪಂಚಾಯತ್ ೫ನೇ ವಾರ್ಡ್ ಕೊಲ್ಲಂಗಾನದಲ್ಲಿ ಸ್ಥಾಪಿಸಲು ಯತ್ನಿಸುವ ಮೊಬೈಲ್ ಟವರ್ ವಿರುದ್ಧ ಸ್ಥಳೀಯರು ತೀವ್ರ ಪ್ರತಿಭಟನೆಗಿಳಿದಿದ್ದಾರೆ. ಬ್ಲೋಕ್ ಪಂಚಾಯತ್ ಸದಸ್ಯ ಖಾದರ್ ಮಾನ್ಯರ ಅಧ್ಯಕ್ಷತೆಯಲ್ಲಿ ಜರಗಿದ ಸರ್ವಪಕ್ಷ ಸಭೆಯಲ್ಲಿ ವಿವಿಧ ರಾಜಕೀಯ, ಸಾಮಾಜಿಕ ಸಂಘಟನಾ ಪ್ರತಿನಿಧಿಗಳು ಭಾಗವಹಿಸಿದರು.
ಜನವಾಸವಲಯವಾದ ಕೊಲ್ಲಂಗಾನದಲ್ಲಿ ಮೊಬೈಲ್ ಟವರ್ ಸ್ಥಾಪಿಸುವುದು ಆರೋಗ್ಯಪರವಾದ ಹಾಗೂ ಪರಿಸರಕ್ಕೆ ಮಾರಕವಾದ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬ ಭೀತಿ ಹಿನ್ನೆಲೆಯಲ್ಲಿ ಜನರ ಸುರಕ್ಷಿತೆ ಹಾಗೂ ಆರೋಗ್ಯವನ್ನು ಮುಂದಿಟ್ಟುಕೊಂಡು ಟವರ್ ಸ್ಥಾಪಿಸುವ ಕ್ರಮದಿಂದ ಹಿಂಜರಿಯಬೇಕೆಂದು ಸಭೆ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೂ ಸಂಬಂಧಪಟ್ಟ ಇಲಾಖೆಗಳಿಗೂ ದೂರು ನೀಡಲು ಜನಪರ ಆಂಧೋಲನವನ್ನು ಆಯೋಜಿಸಲು ಕ್ರಿಯಾ ಸಮಿತಿ ರೂಪೀಕರಿಸಲಾಯಿತು. ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ಎಂ. ರಾಜೀವನ್ ನಂಬ್ಯಾರ್, ಮಂಡಲ ಅಧ್ಯಕ್ಷ ಮಹಮ್ಮದ್ ವಟ್ಟಯಕ್ಕಾಡ್, ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಮೋಹನನ್ ಪನ್ನಿಪ್ಪಾರ, ಬಿಜೆಪಿ ಬೂತ್ ಅಧ್ಯಕ್ಷ ಉದಯ ಕುಮಾರ್, ವಿವಿಧ ರಾಜಕೀಯ ಪಕ್ಷದ ಮುಖಂಡರಾದ ಸಾದಿಕ್ ಕೊಲ್ಲಂಗಾನ, ಸಂತೋಷ್ ಕ್ರಾಸ್ತಾ, ಸುಜಾತಾ ರೈ, ಧರ್ಮಧೀರ ಎಂ., ಅಬ್ದುಲ್ ರಶೀದ್, ರಾಫೆಲ್ ರೋಡ್ರಿಗಸ್, ಹರ್ಷ ಕುಮಾರ್, ಕಿಶೋರ್, ಗಣೇಶ್, ರಶೀದ, ಶೈಜ, ಪೆಲಿಕ್ಸ್, ಶರತ್, ವಿಜಯ್ ಜೋನ್, ಸುರೇಶ್ ರೋಡ್ರಿಗಸ್ ಮಾತನಾಡಿದರು. ವಾರ್ಡ್ ಪ್ರತಿನಿಧಿ ಮಂಜು ಕೆ. ವಿಜಯ್ ಸ್ವಾಗತಿಸಿ, ಶಶಿಕರ ವಂದಿಸಿದರು.






