ಬದಿಯಡ್ಕ: ತೀವ್ರ ರಕ್ತದೊತ್ತಡದಿಂದ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಚಂಬಲ್ತಿಮಾರ್ ಬಳಿಯ ವಳಮಲೆ ಸುಳ್ಯೋಡು ನಿವಾಸಿ ದಿ| ಸದಾಶಿವ ಎಂಬವರ ಪುತ್ರ ಕೀರ್ತೀಶ್ (37) ಮೃತಪಟ್ಟ ಯುವಕನಾಗಿದ್ದಾರೆ. ಇವರು ಮಂಗಳೂರು ಮುಲ್ಕಿಯಲ್ಲಿ ಬಿಎಸ್ಎನ್ಎಲ್ ಉದ್ಯೋಗಿಯಾಗಿದ್ದರು. ಶನಿವಾರ ಅಲ್ಲಿನ ವಾಸಸ್ಥಳದಲ್ಲಿ ಇವರು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಜತೆಗಿದ್ದವರು ಸುರತ್ಕಲ್ನ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಅಪರಿಮಿತ ರಕ್ತದೊತ್ತಡದಿಂದ ಅಸ್ವಸ್ಥತೆ ಉಂಟಾಗಿರುವುದಾಗಿ ತಪಾಸಣೆಯಲ್ಲಿ ತಿಳಿದು ಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೀರ್ತೀಶ್ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಸ್ವ-ಗೃಹಕ್ಕೆ ತಲುಪಿಸಿ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ತಾಯಿ ವನಿತ, ಸಹೋದರ ಸೂರ್ಯನಾರಾಯಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






