ಯುವಕನ ಅಪಹರಣ ಪ್ರಕರಣ: ಆರೋಪಿಯನ್ನು ಸೆರೆಹಿಡಿಯಲು ಉಪ್ಪಳಕ್ಕೆ ತಲುಪಿದ ಪೊಲೀಸರ ಮೇಲೆ ಹಲ್ಲೆ; ಆರೋಪಿ ಸೆರೆ

ಕುಂಬಳೆ: ಕಾಞಂಗಾಡ್ ಮಾಣಿ ಕ್ಕೋತ್ ಕೊಳವಯಲ್ ನಿವಾಸಿ ಯನ್ನು ಅಪಹರಣಗೈದ ಪ್ರಕರಣದಲ್ಲಿ ಆರೋಪಿಯಾದ ಯುವಕನನ್ನು ಸೆರೆಹಿಡಿಯಲು ತಲುಪಿದ ಪೊಲೀಸರ ಮೇಲೆ ಹಲ್ಲೆಗೈದ ಘಟನೆ ನಡೆದಿದೆ. ಇದರಿಂದ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಗಾಯ ಗಂಭೀರವಾಗಿದೆ.  ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತಲುಪಿ ಆರೋಪಿಯಾದ ಉಪ್ಪಳ ಮಣಿಮುಂಡದ ಸುಹೈಲ್ (30)ಎಂಬಾತನನ್ನು ಬಂಧಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಆರೋ ಪಿಯೂ, ಗೂಂಡಾ ನೇತಾರನೂ, ಮಂಗಳೂರಿನಲ್ಲಿ ನಡೆದ ದಾಳಿಯಲ್ಲಿ ಕೊಲೆಗೈಯ್ಯಲ್ಪಟ್ಟ ಖಾಲಿಯಾ ರಫೀಕ್‌ನ ಮಗನಾಗಿದ್ದಾನೆ ಸುಹೈಲ್ ಎಂದು ಪೊಲೀಸರು ತಿಳಿಸಿದ್ದಾರೆ.  ನಿನ್ನೆ ರಾತ್ರಿ ನಡೆದ ಘಟನೆಯ ಕುರಿತು ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ:- ಕೊಳವಯಲ್ ನಿವಾಸಿಯಾದ ಶಹದ್ ಎಂಬ ಯುವಕನನ್ನು  2026 ಮಾರ್ಚ್ 4ರಂದು  ಕಾಞಂಗಾಡ್ ಇಕ್ಭಾಲ್ ರೋಡ್ ಜಂಕ್ಷನ್‌ನಲ್ಲಿ ಕಾರಿನಲ್ಲಿ ಅಪ ಹಣಗೈದ ಪ್ರಕರಣದ ಆರೋಪಿಯಾಗಿ ದ್ದಾನೆ ಸುಹೈಲ್. ಇತರ ಆರೋಪಿ ಗಳನ್ನು ಸೆರೆಹಿಡಿಯಲಾಗಿದ್ದರೂ  ಈತನನ್ನು ಬಂಧಿಸಲಾಗಿಲ್ಲ. ತಲೆಮರೆಸಿ ಕೊಂಡಿದ್ದ ಆರೋಪಿ ಉಪ್ಪಳ ಮಣಿಮುಂಡದ ಮನೆಗೆ ತಲುಪಿ ದ್ದಾನೆಂಬ ಗುಪ್ತ  ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಹೊಸದುರ್ಗ ಎಸ್‌ಐ ನೇತೃತ್ವದ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸ್ಕ್ವಾಡ್ ಸದಸ್ಯರಾದ ಸಜೀಶ್,ನಿಕೇಶ್, ಥೋ ಮಸ್ ಎಂಬಿವರು ಮಣಿಮುಂಡದ ಮನೆಗೆ ತಲುಪಿದ್ದರು. ಪೊಲೀಸರನ್ನು ಕಂಡೊಡನೆ ಸುಹೈಲ್ ಮನೆಯಿಂದ ಹೊರಗೆ ಓಡಿದ್ದಾನೆ.

ಪೊಲೀಸರು ಹಿಂಬಾಲಿಸಿದಾಗ  ಆರೋಪಿ ಬೇರೊಂದು ಮನೆಗೆ  ನುಗ್ಗಿದ್ದನು. ಆರೋಪಿ ಪಾರಾಗದಿ ರಲು ಮನೆಯ ಎರಡೂ ಭಾಗಗಳಲ್ಲ್ಲಿ ಪೊಲೀಸರು ಕಾದು ನಿಂತರು. ಈಮಧ್ಯೆ ಕಬ್ಬಿಣದ ಸರಳು ಹಿಡಿದು ಹೊರಗೆ ಬಂದ ಸುಹೈಲ್ ಸಿವಿಲ್ ಪೊಲೀಸ್ ಆಫೀಸರ್ ಸಜೀಶ್‌ರ ಮೇಲೆ ಹಲ್ಲೆಗೈದಿದ್ದಾನೆ. ಕೂಡಲೇ ಮನೆಯ ಹಿಂಭಾಗದಲ್ಲಿದ್ದ ಪೊಲೀಸರು ತಲುಪಿ ಆರೋಪಿಯನ್ನು ಕೈಯ್ಯಾರೆ ಹಿಡಿದು ವಾಹನಕ್ಕೆ ಹತ್ತಿಸಲು ಪ್ರಯತ್ನಿಸುತ್ತಿದ್ದಾಗ  ಸುಹೈಲ್‌ನ ತಾಯಿ, ಪತ್ನಿ ಹಾಗೂ ಸ್ನೇಹಿತರು ಒಳಗೊಂಡ 8ರಷ್ಟು ಮಂದಿ ಅಲ್ಲಿಗೆ ತಲುಪಿ ಪೊಲೀಸರ ಮೇಲೆ ಹಲ್ಲೆಗೈದಿದ್ದಾರೆ. ಇದರಿಂದ ಥೋಮಸ್ ಹಾಗೂ ನಿಕೇಶ್ ಗಾಯಗೊಂಡಿದ್ದಾರೆ.ವಿಷಯ ತಿಳಿದು ಮಂಜೇಶ್ವರ ಠಾಣೆಯಿಂದ ಹೆಚ್ಚಿನ ಸಂಖ್ಯೆಯ ಪೊಲೀಸರು ತಲುಪಿ ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಈ ಹಲ್ಲೆ ಘಟನೆಗೆ ಸಂಬಂಧಿಸಿ 8 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸುಹೈಲ್‌ನನ್ನು ಕಾಞಂಗಾಡ್‌ಗೆ ಕೊಂಡೊಯ್ದು ಬಂಧನ ದಾಖಲಿಸಲಾಗಿದೆ. ಕೊಂಡೊಯ್ದು ಬಂಧನ ದಾಖಲಿಸಲಾಗಿದೆ.

You cannot copy contents of this page