ಮುಳ್ಳೇರಿಯ: ಬೆಳ್ಳೂರು ಪಳ್ಳಪ್ಪಾಡಿಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕರ್ನಾಟಕದ ಪುತ್ತೂರು ಬಳಿಯ ಮಾಡಾವು ಬದ್ರಿಯಾ ಜುಮಾ ಮಸೀದಿ ಪರಿಸರ ದಲ್ಲಿ ನಿನ್ನೆ ರಾತ್ರಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಬೆಳ್ಳೂರು ಪಳ್ಳ ಪ್ಪಾಡಿಯ ಸೈನುದ್ದೀನ್ ಎಂಬವರ ಪತ್ನಿ ಸರೀನ (27) ಮನೆ ಸಮೀಪದ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೊನ್ನೆ ಸಂಜೆ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ನಾಲ್ಕನೇ ವಿವಾಹ ವಾರ್ಷಿಕಕ್ಕೆ ಎರಡು ದಿನಗಳ ಮೊದಲು ಸರೀನ ನೇಣು ಬಿಗಿದು ಸಾವಿಗೀ ಡಾಗಿದ್ದಾರೆ.
2022 ಮೇ 29ರಂದು ಸರೀನ ಹಾಗೂ ಸೈನುದ್ದೀನ್ರ ಮದುವೆ ಮತಾಚಾರ ಪ್ರಕಾರ ನಡೆಸಲಾಗಿತ್ತು. ಆದರೆ ಇದುವರೆಗೆ ಅವರಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಸರೀನ ಭಾರೀ ಮಾನಸಿಕ ಕಿರುಕುಳವನ್ನು ಎದುರಿಸಬೇಕಾಗಿ ಬಂದಿರುವುದಾ ಗಿಯೂ, ಸಹೋದರಿಯ ಸಾವಿನಲ್ಲಿ ಸಂಶಯವಿರುವುದಾಗಿ ಸಹೋದರ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ. ಪತಿಯ ಮನೆಯವರು ಫೋನ್ ಕರೆ ಮಾಡಿ ಸರೀನ ಸಾವಿಗೀಡಾದ ವಿಷಯವನ್ನು ತಿಳಿಸಿರುವುದಾಗಿಯೂ ಅವರು ಹೇಳಿದ್ದಾರೆ.
ಮಾನಸಿಕ ಕಿರುಕುಳ ಸಹಿಸಲಾಗದೆ ಸಹೋದರಿ ಹಲವು ಬಾರಿ ಪುತ್ತೂರು ಮಾಡಾವು ಸನಂಗಳದಲ್ಲಿರುವ ತಾಯಿ ಮನೆಗೆ ಬಂದು ಅಲ್ಲಿ ವಾಸಿಸುತ್ತಿದ್ದಳು. ಪತಿಯ ಸಂಬಂಧಿಕರು ನಡೆಸಿದ ಮಧ್ಯಸ್ಥಿಕೆ ಚರ್ಚೆಯ ಬಳಿಕ ಸರೀನ ಮತ್ತೆ ಪತಿಯ ಮನೆಗೆ ತೆರಳಿದ್ದಳು. ಅನಂತರವೂ ಹಲವು ಬಾರಿ ಕಿರುಕುಳ ಎದುರಿಸಬೇಕಾಗಿ ಬಂತು. ಆ ವೇಳೆ ತಾನು ಪಳ್ಳಪ್ಪಾಡಿಯ ಆಕೆಯ ಮನೆಗೆ ತೆರಳಿ ಆಕೆಯನ್ನು ಸಾಂತ್ವನ ಪಡಿಸಿರುವುದಾಗಿಯೂ ಸಹೋದರ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ. ಸರೀನಾಳ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದೂ ಅವರು ಆಗ್ರಹಪಟ್ಟಿದ್ದಾರೆ. ಇದೇ ವೇಳೆ ಘಟನೆಗೆ ಸಂಬಂಧಿಸಿ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕ ಮಾತ್ರವೇ ಸಾವಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸುತ್ತಿದ್ದಾರೆ. ದಿ| ಬಡುವನ್ ಕುಂಞಿ- ನಫೀಸ ದಂಪತಿಯ ಪುತ್ರಿಯಾದ ಸರೀನಾ ಇತರ ಸಹೋದರ- ಸಹೋದರಿಯರಾದ ಶರೀಫ್, ಫಾತಿಮ, ಮೈಮೂನ, ದಾವೂದ್, ಸುಬೈದ, ಸುಮಯ್ಯ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.





