ಕುಂಬಳೆ: ಕುಂಬಳೆಯ ಹಳೆ ಬಸ್ ನಿಲ್ದಾಣಕ್ಕೆ ಬಸ್ಗಳು ಪ್ರವೇಶಿಸಲು ಹಾಗೂ ಪ್ರಯಾಣಿ ಕರನ್ನು ಇಳಿಸಿ ಹತ್ತಿಸಲು ಕೂಡಲೇ ವ್ಯವಸ್ಥೆ ಏರ್ಪಡಿಸ ಬೇಕೆಂದೂ ಇಲ್ಲದಿದ್ದಲ್ಲಿ ಚಳವಳಿ ನಡೆಸಲಾ ಗುವುದೆಂದು ಬಿಜೆಪಿ ಪಂಚಾ ಯತ್ ಸಮಿತಿ ಮುನ್ನೆಚ್ಚರಿಕೆ ನೀಡಿದೆ 40 ವರ್ಷಗಳ ಹಿಂದೆ ಸ್ಥಾಪಿಸಿದ ಬಸ್ ನಿಲ್ದಾಣವನ್ನು ಖಾಸಗಿ ಶಾಪಿಂಗ್ ಕಾಂಪ್ಲೆಕ್ಸ್ನವರಿಗೆ ಬಾಡಿಗೆ ನೀಡುವುದ ಕ್ಕಾಗಿ ಬದಲಾಯಿಸುವುದು ಸರಿಯಲ್ಲ ವೆಂದು ಸಭೆ ತಿಳಿಸಿದೆ. ಹಳೆ ಬಸ್ ನಿಲ್ದಾಣದ ಸಮೀಪದಲ್ಲೇ ಕುಂಬಳೆ ಪಂಚಾಯತ್ನ ಸರಕಾರಿ ಕಚೇರಿಗಳು ನೆಲೆಗೊಂಡಿವೆ. ಆದರೆ ಈಗ ಬಸ್ ನಿಲ್ದಾಣವನ್ನು ಬದಲಾಯಿಸುವು ದರಿಂದ ಪಂಚಾಯತ್ ಕಚೇರಿ, ಕೆಎಸ್ಇಬಿ, ಪೊಲೀಸ್ ಠಾಣೆ, ಕೃಷಿ ಭವನ, ಮೃಗಾಸ್ಪತ್ರೆ, ಬ್ಯಾಂಕ್ಗಳು, ಮಾರ್ಕೆಟ್ ಮೊದಲಾ ದೆಡೆಗಳಿಗೆ ತೆರಳಬೇಕಾದ ವರು ಸಂಕಷ್ಟಕ್ಕೀಡಾಗು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ಗಳು ಈ ಮೊದಲಿನಂತೆಯೇ ಹಳೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಲಿರುವ ಸೌಕರ್ಯ ಏರ್ಪಡಿಸಲೇ ಬೇಕೆಂದು ಸಭೆ ಒತ್ತಾಯಿಸಿದೆ. ಬಿಜೆಪಿ ಮಂಡಲ ಉಪಾಧ್ಯಕ್ಷ ವಿಕ್ರಂ ಪೈ ಸಭೆಯನ್ನು ಉದ್ಘಾಟಿಸಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ನೇತಾರರಾದ ಶಿವಪ್ರಸಾದ್ ರೈ, ವಿನೋದನ್ ಕಡಪ್ಪುರ, ಗೋಪಾಲನ್ ಕಂಚಿಕಟ್ಟೆ, ಶಶಿ ಕುಂಬಳೆ, ಪಂ. ಸದಸ್ಯರಾದ ರಮೇಶ್ ಭಟ್, ಕಾಂಜಾರ ಶಾರದ, ಅಮಿತ್ ಆಳ್ವ, ಅಜಿತ್ ಕುಮಾರ್, ವಿವೇಕಾ ನಂದ ಶೆಟ್ಟಿ, ವರುಣ್ ಕುಮಾರ್ ಮಾತನಾಡಿದರು.





