ಸ್ಫೋಟಕ ವಸ್ತು ವಶ ಪ್ರಕರಣ:ಕಟ್ಟತ್ತಡ್ಕ ಎಕೆಜಿ ನಗರದ ಕ್ವಾರ್ಟರ್ಸ್‌ಗೆ ಎನ್‌ಐಎ

ದಾಳಿ; ಆರ್‌ಸಿ ಬುಕ್, 3 ವಿಸಿಟಿಂಗ್ ಕಾರ್ಡ್‌ಗಳು ವಶ

ಕುಂಬಳೆ: ಮಲಪ್ಪುರಂನ ಕೊಂಡೋಟಿಯಲ್ಲಿ  ಉಗ್ರ ಸ್ಫೋಟ ಸಾಮರ್ಥ್ಯದ  ಒಂದು ಲೋಡ್ ಸ್ಫೋಟಕ ವಸ್ತುಗಳನ್ನು ವಶಪಡಿಸಿ ಕೊಂಡ ಪ್ರಕರಣದ ತನಿಖೆಯಂಗ ವಾಗಿ  ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟತ್ತಡ್ಕ ಎಕೆಜಿ ನಗರ ದಲ್ಲೂ ಎನ್‌ಐಎ ದಾಳಿ ನಡೆಸಿದೆ. ಮೊನ್ನೆ ಬೆಳಿಗ್ಗೆ  ಇಲ್ಲಿಗೆ ತಲುಪಿದ ಐದು ಮಂದಿ ಅಧಿಕಾರಿಗಳ ತಂಡ ಕ್ವಾರ್ಟರ್ಸ್‌ವೊಂದರಲ್ಲಿ  ತಪಾಸಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎಯ ಕಸ್ಟಡಿಯಲ್ಲಿರುವ ಮುಹಮ್ಮದ್ ಸಲೀಂ ಎಂಬಾತನ ಪತ್ನಿ ಹಾಗೂ ಮಕ್ಕಳು ವಾಸಿಸುವ ಕ್ವಾರ್ಟರ್ಸ್‌ಗೆ ಎನ್‌ಐಎ ದಾಳಿ ನಡೆಸಿದೆ. ದಾಳಿಯಲ್ಲಿ ಪ್ರಕರಣದ ನಿರ್ಣಾಯಕ ದಾಖಲೆಯೆಂದು ತನಿಖಾ ತಂಡ ಅಂದಾಜಿಸಿದ ಆರ್‌ಸಿ ಬುಕ್ ಹಾಗೂ ಮೂರು ವಿಸಿಟಿಂಗ್ ಕಾರ್ಡ್‌ಗಳನ್ನು  ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.

ಸ್ಫೋಟಕವಸ್ತು ವಶ ಪ್ರಕರಣಕ್ಕೆ ಸಂಬಂಧಿಸಿ ಮೊನ್ನೆ ಬೆಳಿಗ್ಗೆ ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಡುಮೇನಿ ಎಂಬಲ್ಲೂ ಎನ್‌ಐಎ ದಾಳಿ ನಡೆಸಿತ್ತು. ಕ್ವಾರೆಯ ಮಾಲಕ ಸಜಿ ಎಂಬಾತನ ಮನೆ ಹಾಗೂ ಚಟುವಟಿಕೆ ನಿಲುಗಡೆಗೊ ಳಿಸಿದ ಕ್ವಾರೆಯಲ್ಲಿ ಎನ್‌ಐಎ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದೇ ರೀತಿಯ ತಪಾಸಣೆ ಕಣ್ಣೂರು ಜಿಲ್ಲೆಯ ಚೆರುಪುಳದಲ್ಲೂ ನಡೆಸಲಾಗಿದೆ.  ಕಲ್ಲಿಕೋಟೆ ಹಾಗೂ ಮಲಪ್ಪುರಂನ ಎರಡು ಕೇಂದ್ರಗಳಿಗೂ ಎನ್‌ಐಎ ದಾಳಿ ನಡೆಸಿದೆ.

2026 ಫೆಬ್ರವರಿ 3ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ತಿರೂರಂಗಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆಮ್ಮಾಡ್-ತಲಪ್ಪಾರ ರಸ್ತೆಯಲ್ಲಿ ಇಂಡ್ಯನ್ ಆಯಿಲ್ ಪೆಟ್ರೋಲ್ ಬಂಕ್‌ನ ಮುಂಭಾಗದಲ್ಲಿರುವ ಫರ್ಹ ಹೋಲೋ ಬ್ರಿಕ್ಸ್ ಕಂಪೆನಿಯ ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಲಾರಿಯಿಂದ ಸ್ಫೋಟಕ ವಸ್ತುಗನ್ನು ವಶಪಡಿಸಲಾಗಿತ್ತು. ಈ ಘಟನೆಯಲ್ಲಿ ಕಾನೂನು ವಿರುದ್ಧವಾಗಿ  ಸ್ಫೋಟಕ ವಸ್ತುಗಳೆಂದು ತಿಳಿದು ಕಾರ್ಯಾಚರಿಸಿದ ಲಾರಿ ಚಾಲಕ ಹಾಗೂ ಮತ್ತಿಬ್ಬರ ವಿರುದ್ಧ ತಿರೂರಂಗಾಡಿ ಪೊಲೀಸರು ಕೇಸು ದಾಖಲಿಸಿದ್ದರು. ಈರುಳ್ಳಿ ತುಂಬಿದ ಗೋಣಿ ಚೀಲಗಳ ಮಧ್ಯೆ ೪೪೮ ಪೆಟ್ಟಿಗೆಗಳಲ್ಲಾಗಿ 89,600 ಜಿಲಾಟಿನ್ ಸ್ಟಿಕ್‌ಗಳು, ೩೫ ಪೆಟ್ಟಿಗೆಗಳಲ್ಲಾಗಿ 10,500 ಶಾಕ್ ಟ್ಯೂಬ್‌ಗಳನ್ನು ಅಂದು ವಶಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಎನ್‌ಐಎ ಸ್ವತಃ  ಕೇಸು ದಾಖಲಿಸಿ ತನಿಖೆ ಆರಂಭಿಸಿತ್ತು.

You cannot copy contents of this page