ಪತ್ನಿಯನ್ನು ಶಾಲೆಗೆ ಕಳುಹಿಸಿಕೊಟ್ಟ ಬಳಿಕ ಹಿಂತಿರುಗಿದ ಪತಿ ಮನೆಯೊಳಗೆ ನೇಣು

ಹೊಸದುರ್ಗ: ಪತ್ನಿಯನ್ನು ಶಾಲೆಗೆ ಬಸ್‌ನಲ್ಲಿ ಕಳುಹಿಸಿಕೊಟ್ಟ ಬಳಿಕ ಹಿಂತಿರುಗಿ ಮನೆಗೆ ತಲುಪಿದ ಪತಿ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಪನತ್ತಡಿ ತಚ್ಚಾರಕ್ಕಡ ನಿವಾಸಿ ಶಂಕರ್ ಬೇಕರಿ ಆಂಡ್ ಕೂಲ್ ಬಾರ್ ಮಾಲಕ ಹಾಗೂ ಸಮಾಜಸೇವಕನಾಗಿದ್ದ ಕೆ.ಎನ್. ವೇಣು (52) ನಿನ್ನೆ ಬೆಳಿಗ್ಗೆ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮನೆಯ ಒಂದನೇ ಮಹಡಿಗೆ ಹತ್ತಿದ್ದ ತಂದೆ ಬಳಿಕ ಕಂಡುಬಾರದ ಹಿನ್ನೆಲೆಯಲ್ಲಿ ಪುತ್ರ ನಡೆಸಿದ ತಪಾಸಣೆಯಲ್ಲಿ ತಂದೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ವ್ಯಾಪಾರಿ- ವ್ಯವಸಾಯಿ ಏಕೋಪನಾ ಸಮಿತಿ ಪನತ್ತಡಿ ಘಟಕದ  ಮಾಜಿ ಅಧ್ಯಕ್ಷ, ಬಳಂತೋಡ್ ಶಾಲಾ ಮಾಜಿ ಪಿಟಿಎ ಅಧ್ಯಕ್ಷ, ಕೋಳಿಚ್ಚಾಲ್ ಲಯನ್ಸ್ ಕ್ಲಬ್ ಪದಾಧಿಕಾರಿಯಾಗಿ ಸಕ್ರಿಯರಾಗಿದ್ದರು. ದಿ| ನಾರಾಯಣ ಪೊದುವಾಳ್ ತಂದೆಯಾಗಿದ್ದು, ಮೃತರು ತಾಯಿ ತಂಬಾಯಿ, ಪತ್ನಿ ಕಾಞಂಗಾಡ್ ಇಕ್ಬಾಲ್ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆ ಸರಿತ, ಮಕ್ಕಳಾದ ಶಂಕರ್, ಅಂಜನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page