ಡಾ. ರಮಾನಂದ ಬನಾರಿ ಅಭಿನಂದನೆ : ನೀರ್ಚಾಲಿನಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ

ನೀರ್ಚಾಲು: ಕಾಸರಗೋಡು ಸಹಿತ ಕರಾವಳಿ ಕರ್ನಾಟಕದ ಸಾಧಕ ಶ್ರೇಷ್ಠರ ಯಶೋಗಾಥೆಗಳ ಮರು ಓದುವಿಕೆ ಸ್ಪೂರ್ತಿದಾಯಕವಾದುದು. ಕಾಸರಗೋಡು ಗಡಿನಾಡನ್ನು ಸಾಂಸ್ಕೃತಿಕವಾಗಿ ಕರ್ನಾಟಕದೊಂದಿಗೆ ಬೆಸೆಯುವ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದವರಲ್ಲಿ ಡಾ.ರಮಾನಂದ ಬನಾರಿ ಪ್ರಮುಖರು. ಅವರ ೮೫ರ ವಸಂತದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಆ ಆಶಯ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾ ನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಮೋಹನ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಲೇಖಕರ ಸಂಘದ ನೇತೃತ್ವದಲ್ಲಿ ಕ.ಸಾ.ಪ ಕೇರಳ ಗಡಿನಾಡ ಘಟಕ, ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ಮತ್ತು ಕೀರಿಕ್ಕಾಡು ಸ್ಮಾರಕ ಸಾಂಸ್ಕೃತಿಕ ಅಧ್ಯಯನ ಕೇಂದ್ರ ದೇಲಂಪಾಡಿ, ಕಲಾಕುಂಚ ಕಾಸರಗೋಡು, ಗಿಳಿವಿಂಡು ಮಂಜೇಶ್ವರ, ಸ್ನೇಹರಂಗ ಕಾಸರಗೋಡು ಸಹಿತ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಗಳ ಆವರಣದಲ್ಲಿ ಕವಿ, ವೈದ್ಯ, ಅರ್ಥಧಾರಿ ಡಾ.ರಮಾನಂದ ಬನಾರಿ ೮೫ರ ಅಂಗವಾಗಿ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ರಮಾನಂದ ಬನಾರಿ, ನಾಡಿನ ವಿದ್ವತ್ ಪರಂಪರೆಗೆ ಚಾಲನೆ ಕೊಟ್ಟ ಕೇಂದ್ರ ನೀರ್ಚಾಲು. ನಾವೆಲ್ಲ ಋಣ ತ್ರಯ ಮತ್ತು ಗುಣ ತ್ರಯಗಳನ್ನು ನಂಬಿಕೊAಡುಬA ದವರು. ಗುಣ ತ್ರಯಗಳು ನಮ್ಮ ಸ್ವಭಾವ, ಸಂಸ್ಕಾರಗಳನ್ನು ನಿರೂಪಿ ಸುತ್ತದೆ. ಋಣ ತ್ರಯಗಳು ನಮ್ಮ ಕರ್ತವ್ಯಗಳನ್ನು ನಿರ್ದೇಶಿಸುತ್ತದೆ. ಗಳಿಕೆಗಳನ್ನು ಸಮಾಜಕ್ಕೆ ಮರಳಿ ನೀ ಡುವ ಪ್ರವೃತ್ತಿಯೇ ಬದುಕಿನ ಸಂತೃಪ್ತಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಅಲ್ಪ ಪ್ರಯತ್ನಗಳನ್ನು ಮಾಡಿರುವ ಭಾವ ವಷ್ಟೇ ತನ್ನದು ಎಂದು ತಿಳಿಸಿದರು.
ಉದ್ಘಾಟಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರು ಷೋತ್ತಮ ಬಿಳಿಮಲೆ ಡಾ.ರಮಾನಂದ ಬನಾರಿ ಸಂಪಾದಕತ್ವದಲ್ಲಿ ಹೊರತಂದ ಕನ್ನಡಿಯಲ್ಲಿ ಕನ್ನಡಿಗ ಕೃತಿಯ 7ನೇ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರÀÄ. ಡಾ. ಬನಾರಿ ರಚಿಸಿರುವ ಕೃತಿಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದು ಬಿಳಿಮಲೆ ಹೇಳಿದರು.
ನಿವೃತ್ತ ಪ್ರಾಧ್ಯಾಪಿಕೆ ಡಾ.ಪ್ರಮೀಳಾ ಮಾಧವ್ ಕೃತಿ ಪರಿಚಯ ಮಾಡಿದರು. ಕನ್ನಡ ಲೇಖಕರ ಸಂಘದ ಡಾ.ಕಿಶೋರ್ ಕುಮಾರ್ ರೈ ಶೇಣಿ, ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಸುಕೇಶ್ ಕೆ., ಪ್ರೊ.ಪಿ.ಎನ್ ಮೂಡಿತ್ತಾಯ ಶುಭಹಾರೈಸಿದರು.
ಸಾಧಕರಾದ ಡಾ. ಎಸ್.ಆರ್.ನರಹರಿ, ನೆಟ್ಟಣಿಗೆ ಪುರುಷೋತ್ತಮ ಆಚಾರ್ಯ ಅವರನ್ನು ಗೌರವಿಸಲಾಯಿತು. ಡಾ.ಬನಾರಿ ದಂಪತಿಗಳನ್ನು ಗೌರವಿಸಿ ಅಭಿನಂದಿಸಲಾಯಿತು. ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಚಂದ್ರಶೇಖರ ಏತಡ್ಕ ವಂದಿಸಿದರು. ಕವಿತಾ ಕೂಡ್ಲು, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ನಿರೂಪಿಸಿದರು.

You cannot copy contents of this page