ಅಂಡರ್ ಪಾಸ್‌ನಲ್ಲಿ ಕಟ್ಟಿ ನಿಂತ ನೀರು: ಅಪಾಯಕ್ಕೀಡಾದ ಶಾಲಾ ಬಸ್; ಮಕ್ಕಳು ಪಾರು

ಕಾಸರಗೋಡು: ಶಾಲಾ ಮಕ್ಕಳನ್ನು ಹೇರಿಕೊಂಡು ಸಾಗುತ್ತಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯ ಮಾವುಂಗಲ್ ಮೂಲಕಂಡಂ ಅಂಡರ್‌ಪಾಸ್‌ನಡಿಯಲ್ಲಿ ಸಿಲುಕಿ ಮಗುಚುವ ಹಂತಕ್ಕೆ ತಲುಪಿದ್ದು, ಅದೃಷ್ಟವಶಾತ್ ಅಪಾಯದಿಂದ ಮಕ್ಕಳು ಪಾರಾಗಿದ್ದಾರೆ. ನೆಲ್ಲಿತ್ತರ- ವಣ್ಣಾಟ್ ಮೂಲಕ ವೆಳ್ಳಿಕ್ಕೋತ್‌ಗೆ ತೆರಳುವ ಸದ್ಗುರು ಶಾಲೆಯ ಬಸ್ ನಿನ್ನೆ ಸಂಜೆ ಅಪಾಯಕ್ಕೀಡಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿ ಚರಂಡಿ ನಿರ್ಮಾಣ ಇಲ್ಲಿ ಅರ್ಧದಲ್ಲೇ ನಿಂತಿದೆ. ಪುಲ್ಲೂರು ತೋಡಿಗೆ ಹರಿದುಹೋಗಬೇಕಾದ ನೀರು ನಿರ್ಮಾಣದ ಲೋಪದಿಂದಾಗಿ ಅಂಡರ್ ಪ್ಯಾಸೇಜ್‌ನಲ್ಲಿ ಕಟ್ಟಿ ನಿಲ್ಲುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದಾಗಿ ಅಂಡರ್ ಪ್ಯಾಸೇಜ್‌ನ ಮೂಲಕ ವಾಹನಗಳು ಸಾಗುವಾಗ ಹೊಂಡ ಗಮನಕ್ಕೆ ಬಾರದೆ ಅಪಾಯಕ್ಕೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಸ್‌ನಲ್ಲಿ ೩೦ರಷ್ಟು ಮಕ್ಕಳು ಇದ್ದರು. ಇವರನ್ನು ಆಟೋಚಾಲಕರು ಹಾಗೂ ಸ್ಥಳೀಯರು ಸೇರಿ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.

RELATED NEWS

You cannot copy contents of this page