ಅಪಘಾತಕ್ಕೀಡಾದ ಕಾರಿನಲ್ಲಿ ಮದ್ಯ ಪತ್ತೆ: ಬಂಧಿತ ಆರೋಪಿಗೆ ರಿಮಾಂಡ್

ಉಪ್ಪಳ: ಕಾರಿನಲ್ಲಿ ಬೃಹತ್ ಪ್ರಮಾಣದ ಮದ್ಯ ಸಾಗಾಟ ವೇಳೆ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುಳೂರು ಚಾರ್ಲ ಕೆಮ್ಮಜಲು ನಿವಾಸಿ ಪ್ರಜ್ವಲ್ (25) ಎಂಬಾತ ರಿಮಾಂಡ್‌ಗೊಳಗಾದ ಆರೋಪಿಯಾಗಿದ್ದಾನೆ. ಪ್ರಜ್ವಲ್  ಮದ್ಯ ಸಾಗಿಸುತ್ತಿದ್ದ ಕಾರು ಮೊನ್ನೆ ರಾತ್ರಿ 11.20ರ ವೇಳೆ ಉಪ್ಪಳ ಗೇಟ್ ಬಳಿ ಸರ್ವೀಸ್ ರಸ್ತೆಯಲ್ಲಿ ಚರಂಡಿಗಾಗಿ ತೋಡಿದ ಹೊಂಡಕ್ಕೆ ಬಿದ್ದಿತ್ತು. ವಿಷಯ ತಿಳಿದು ಮಂಜೇ ಶ್ವರ ಪೊಲೀಸರು ಅಲ್ಲಿಗೆ ತಲುಪಿ ಕಾರನ್ನು ಪರಿಶೀಲಿಸಿದಾಗ ಕರ್ನಾಟಕ ನಿರ್ಮಿತ 180 ಎಂಎಲ್‌ನ 1483 ಬಾಟ್ಲಿ ಮದ್ಯ, 90 ಎಂಎಲ್‌ನ 763 ಪ್ಯಾಕೆಟ್ ಮದ್ಯ ಪತ್ತೆಯಾಗಿತ್ತು. ಇದರಿಂದ ಕಾರು ಚಲಾಯಿಸುತ್ತಿದ್ದ ಪ್ರಜ್ವಲ್‌ನನ್ನು ಪೊಲೀಸರು ಬಂಧಿಸಿ ನಿನ್ನೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.

RELATED NEWS

You cannot copy contents of this page