ಕಾಸರಗೋಡು: ಪೆರಿಯಾ ಕಲ್ಯೋಟ್ನ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ಲಾಲ್ ಮತ್ತು ಕೃಪೇಶ್ರನ್ನು ಕೊಲೆಗೈದ ಘಟನೆಯ ಬಳಿಕ ಭುಗಿಲೆದ್ದ ರಾಜಕೀಯ ಘರ್ಷಣೆಗೆ ಸಂಬಂಧಿಸಿ ಬೇಕಲ ಪೊಲೀಸರು ದಾಖಲಿಸಿಕೊಂ ಡಿದ್ದ ಪ್ರಕರಣದ ಆರೋಪಿಗಳಾದ ೧೩ ಮಂದಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಆರೋಪಗಳು ವಿಚಾರಣೆ ಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಹೊಸದುರ್ಗ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (ದ್ವಿತೀಯ) ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಯೂತ್ ಕಾಂಗ್ರೆಸ್ನ ಉದುಮ ಬ್ಲೋಕ್ನ ಕಾರ್ಯದರ್ಶಿಗಳಾಗಿದ್ದ ಉಣ್ಣಿಕೃಷ್ಣನ್ ಪೊಯಿನಾಚಿ, ಸಿ. ಶಶಿಧರನ್, ಕಾಂಗ್ರೆಸ್ನ ಪುಲ್ಲೂರು-ಪೆರಿಯ ಮಂಡಲ ಕಾರ್ಯದರ್ಶಿ ರಾಜನ್ ಅಂಬಲತ್ತರ, ಯೂತ್ ಕಾಂಗ್ರೆಸ್ನ ಮಾಜಿ ಜಿಲ್ಲಾ ಕಾರ್ಯ ದರ್ಶಿ ರಾಜೇಶ್ ಪೆರಿಯಾ, ಯೂತ್ ಕಾಂಗ್ರೆಸ್ನ ಉದುಮ ವಿಧಾನಸಭಾ ಸಮಿತಿ ಕಾರ್ಯದರ್ಶಿ ಅನಿಲ್ ಕಾಯಕುಳಂ, ಯೂತ್ ಕಾಂಗ್ರೆಸ್ನ ಪುಲ್ಲೂರು ಪೆರಿಯ ಮಂಡಲ ಕಾರ್ಯದರ್ಶಿ ವಿ.ಆರ್. ರಂಜಿತ್, ಮನೋಜ್ ಪೆರಿಯ, ಕಿಶೋರ್, ವಿನೋದ್, ಸುಮಿತ್ರನ್, ವಿಪಿನ್, ನಾರಾಯಣನ್ ಮತ್ತು ನವೀನ್ ಕುಮಾರ್ ಎಂಬವರು ಖುಲಾಸೆಗೊಳಿ ಸಲ್ಪಟ್ಟ ಆರೋಪಿಗಳಾಗಿದ್ದಾರೆ.
೨೦೧೯ ಫೆಬ್ರವರಿ ೧೭ರಂದು ರಾತ್ರಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಪೆರಿಯಾ ಕಲ್ಯೋಟ್ನ ಶರತ್ಲಾಲ್ ಮತ್ತು ಕೃಪೇಶ್ರನ್ನು ರಾಜಕೀಯ ದ್ವೇಷದಿಂದ ಇರಿದು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಆ ಘಟನೆ ನಡೆದ ಮರು ದಿನ ನಡೆದ ಹರತಾಳದ ವೇಳೆ ಪೆರಿಯದ ಮಿಲ್ಮಾ ಬೂತ್ನ ಮೇಲೆ ದಾಳಿ ನಡೆಸಿ ಅದನ್ನು ಕೆಡಹಿ ಹಾಕಿದ ದೂರಿನಂತೆ ಆ ಮಿಲ್ಮಾ ಬೂತ್ ಮಾಲಕ ಗೋಪಾಲನ್ ನೀಡಿದ ದೂರಿನಂತೆ ಈ 13 ಮಂದಿ ಯೂತ್ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇವರ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿ ಕೊನೆಗೆ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಪುಲ್ಲೂರು- ಪೆರಿಯ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಕೆ. ಅರವಿಂದಾಕ್ಷನ್ರನ್ನು ಈ ಪ್ರಕರಣದ ಒಂದನೇ ಆರೋಪಿಯಾಗಿ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ನಂತರ ನಡೆದ ತನಿಖೆಯಲ್ಲಿ ಆ ಘಟನೆ ನಡೆಯುವ ವೇಳೆ ಅವರು ಕೊಲೆಗೈಯ್ಯಲ್ಪಟ್ಟ ಕೃಪೇಶ್ ಮತ್ತು ಶರತ್ಲಾಲ್ರ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆಂದು ಸ್ಪಷ್ಟಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಬಳಿಕ ಪೊಲೀಸರು ಈ ಪ್ರಕರಣದ ಆರೋಪಿ ಸ್ಥಾನದಿಂದ ಸ್ವಯಂ ಆಗಿ ಹೊರತುಪಡಿಸಿದ್ದರು.





