ಕುಂಬಳೆ: ಆಟೋ ಚಾಲಕನೋರ್ವ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಚ್ಲಂಗೋಡು ಗ್ರಾಮದ ಅಡ್ಕ ನಿವಾಸಿ ನಾಗೇಶ ಪೂಜಾರಿ ಎ (37) ಮೃತ ವ್ಯಕ್ತಿ. ಇವರು ಬಂದ್ಯೋಡಿನಲ್ಲಿ ಆಟೋ ಚಾಲಕನಾಗಿದ್ದರು. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಮನೆಯ ಕೆಳ ಅಂತಸ್ತಿನ ಹಾಲ್‌ನಲ್ಲಿ ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ನಾಗೇಶ ಪೂಜಾರಿ ಕಂಡುಬಂದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಆರ್ಥಿಕ ಸಮಸ್ಯೆಯೇ ಇವರು ಆತ್ಮಹತ್ಯೆಗೈಯ್ಯಲು ಕಾರಣವೆಂದು ಸಂಶಯಿಸಲಾಗಿದೆ ಯೆಂದು ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.
ಶಿವಪ್ಪ ಪೂಜಾರಿ-ಗಿರಿಜಾ ದಂಪತಿಯ ಪುತ್ರನಾದ ಮೃತರು ಪತ್ನಿ ಸಂಧ್ಯಾ, ಪುತ್ರಿ ಅನ್ವಿಕಾ, ಸಹೋದರ-ಸಹೋದರಿಯರಾದ ದಿನೇಶ್ ಪೂಜಾರಿ, ಜಗದೀಶ್ ಪೂಜಾರಿ, ಆಶಾಲತಾ, ಹೇಮಲತಾ, ಮಮತಾ, ಧನಲಕ್ಷ್ಮಿ, ದೀಪಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





