ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನಯಾಲ್ ಪೆರಿಯಾಟಡ್ಕದಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳವಿಗೀಡಾದ ಘಟನೆ ನಡೆದಿದೆ. ನೀರಾಟಿ ಎಂಬಲ್ಲಿನ ಧನ್ಯ ಎಂಬವರ ಮನೆಯಲ್ಲಿ ಇಂದು ಮುಂಜಾನೆ 5 ಗಂಟೆಯಿಂದ 6 ಗಂಟೆ ಮಧ್ಯೆಗಿನ ಸಮಯದಲ್ಲಿ ಕಳವು ನಡೆದಿದೆ. ವಿದ್ಯುತ್ ಮೀಟರ್‌ನ ಪೆಟ್ಟಿಗೆಯೊಳ ಗಿರಿಸಿದ್ದ ಕೀಲಿಕೈ ತೆಗೆದು ಮನೆಯ ಬಾಗಿಲು ತೆರೆದು ಒಳಗೆ ನುಗ್ಗಿದ ಕಳ್ಳರು ಕಪಾಟಿನೊಳಗಿರಿಸಿದ್ದ ೫ ಪವನ್ ಚಿನ್ನಾಭರಣ, 3 ಸಾವಿರ ರೂಪಾಯಿಗಳನ್ನು ದೋಚಿದ್ದಾರೆ.
ಧನ್ಯ ಎಂದಿನಂತೆ ಇಂದು ಮುಂಜಾನೆ 5.10ಕ್ಕೆ ಮನೆಯ ಬಾಗಿಲು ಮುಚ್ಚಿ ವಾಯುವಿಹಾ ರಕ್ಕಾಗಿ ತೆರಳಿದ್ದರು. 6 ಗಂಟೆಗೆ ಅವರು ಮರಳಿ ಬಂದಿದ್ದು, ಮೀಟರ್ ಬಾಕ್ಸ್‌ನಿಂದ ಕೀಲಿ ಕೈ ತೆಗೆದು ಬಾಗಿಲು ತೆರೆದು ಮನೆಯೊಳಗೆ ಪ್ರವೇಶಿಸಿ ನೋಡಿದಾಗಲೇ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಕೂಡಲೇ ಸಹೋದರ ನೀರಾಟ್ಟಿಯ ಮಣಿಗೆ ವಿಷಯ ತಿಳಿಸಿದ್ದಾರೆ. ಮಣಿ ತಲುಪಿದ ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಸ್ಥಳಕ್ಕೆ ತಲುಪಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ತಲುಪಲಿದ್ದಾರೆ. ಕಳವು ನಡೆದ ಹೊತ್ತಿನಲ್ಲಿ ಧನ್ಯರ ಪುತ್ರಿ ಮನೆಯ ಮೇಲಂತಸ್ತಿನಲ್ಲಿ ನಿದ್ರಿಸಿದ್ದಳು.





