ಹೊನ್ನಮೂಲೆ ಕ್ಷೇತ್ರಕ್ಕೆ ಧರ್ಮಸ್ಥಳದಿಂದ ಸಹಾಯ ಮೊತ್ತ ಹಸ್ತಾಂತರ

ಕಾಸರಗೋಡು: ಹೊನ್ನಮೂಲೆ ಶ್ರೀ ಮಹಾಮಾಯಿ ದುರ್ಗಾಪರ ಮೇಶ್ವರಿ ದೇವಸ್ಥಾನ ನೂತನ ಶಿಲಾಮಯದಿಂದ ನಿರ್ಮಾಣವಾಗು ತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೨ಲಕ್ಷ ರೂ. ನೀಡಿರುತ್ತಾರೆ. ಈ ಮೊತ್ತದ ಡಿ.ಡಿ.ಯನ್ನು ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಕಾಸರಗೋಡು ಯೋಜನಾಧಿಕಾರಿ ದಿನೇಶ್, ದರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾಸರಗೋಡು ಇದರ ಗೌರವಾಧ್ಯಕ್ಷ ಜಯಾನಂದ ಕುಮಾರ್ ಹೊಸದುರ್ಗ, ಅಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ,  ವಲಯ ಮೆಲ್ವಿಚಾರಕ ಗೋಪಾಲಕೃಷ್ಣ, ಜನ ಜಾಗೃತಿ ವಲಯ ಅಧ್ಯಕ್ಷ ಕಿರಣ ಪ್ರಸಾದ್ ಕೂಡ್ಲು ಇವರು ಕ್ಷೇತ್ರ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ಕೆ. ಹೊನ್ನಮೂಲೆ, ಅಧ್ಯಕ್ಷ ರೋಹಿತಾಕ್ಷ ಕೆ. ನಾಗರಕಟ್ಟೆ, ಕಾರ್ಯದರ್ಶಿ ರಾಜೇಶ್ ಎಸ್.ರಾವ್, ಕೋಶಾಧಿಕಾರಿ ರಾಧಾಕೃಷ್ಣ ಹೊನ್ನಮೂಲೆ ಇವರಿಗೆ ಹಸ್ತಾಂತರಿಸಿ ದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ದಿವ್ಯಾ ಸಂದೀಪ್ ನಾಗರಕಟ್ಟೆ, ಸಮಿತಿ ಪದಾಧಿಕಾರಿಗಳು, ಸದಸ್ಯರಾದ ಗೊಪಾಲ ಹೊನ್ನಮೂಲೆ, ಮಂಜುನಾಥ ಹೊನ್ನಮೂಲೆ, ಶಶಿಕಾಂತ ಹೊನ್ನಮೂಲೆ, ಪ್ರಕಾಶ್ ಅಮ್ಮಂಗೋಡು, ತುಳಸಿ, ರೇವತಿ, ಚಿತ್ರಕಲಾ, ನಿಶಾ ಅನಿಲ್ ನಾಗರಕಟ್ಟೆ, ಉಷಾ ಅಖಿಲೇಶ್ ಉಪಸ್ಥಿತರಿದ್ದರು.

You cannot copy contents of this page