ಕುಂಬ್ಡಾಜೆ: ಪೊಡಿಪ್ಪಳ್ಳ- ಕುಂಬ್ಡಾಜೆ- ಬೆಳಿಂಜ- ನಾಟೆಕಲ್ಲು ಜಿಲ್ಲಾ ಪಂಚಾಯತ್ ರಸ್ತೆ ಅಭಿವೃದ್ಧಿಗೊಳಿಸಲಾಗುವುದೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ ಜನಪರ ಅಭಿವೃದ್ಧಿ ಸಮಿತಿಗೆ ಭರವಸೆ ನೀಡಿದರು. ಸಮಿತಿ ಪ್ರತಿನಿಧಿಗಳು ಈ ಬಗ್ಗೆ ನೀಡಿದ ಮನವಿಗೆ ಉತ್ತರವಾಗಿ ಅವರು ಈ ಭರವಸೆ ನೀಡಿದ್ದಾರೆ. ರಸ್ತೆಗೆ ತುರ್ತಾಗಿ ಮಾಡಬೇಕಾದ ಕೆಲಸ ಆರಂಭಗೊಂಡಿತು. ರೀ ಟಾರಿಂಗ್ ನಡೆಸಿ ರಸ್ತೆಯನ್ನು ಸಂಚಾರ ಯೋಗ್ಯಗೊಳಿಸಲಾಗುವುದೆಂದು ಅವರು ತಿಳಿಸಿದರು. ಜನಪರ ಸಮಿತಿ ಸದಸ್ಯರಾದ ನ್ಯಾಯವಾದಿ ಪ್ರಸನ್ನ ಕುಮಾರ್, ಡಾ. ವೇಣುಗೋಪಾಲ್ ಕೆ, ಫಾರೂಕ್ ಕುಂಬ್ಡಾಜೆ, ನಾರಾಯಣ ಗೋಸಾಡ, ಅಬ್ದುಲ್ ರಜಾಕ್ ಟಿ.ಎಂ., ಹರೀಶ್ ಗೋಸಾಡ, ಶಂಕರ ಪಾಟಾಳಿ ಭಾಗವಹಿಸಿದರು.






