ಚಳ್ಳಂಗಯ ಶಾಲೆಯಲ್ಲಿ ಅಧ್ಯಾಪಕನ ವಿರುದ್ಧ ನಾಗರಿಕರು ರಂಗಕ್ಕೆ

ಕುಂಬಳೆ: ಧರ್ಮತ್ತಡ್ಕ ಚಳ್ಳಂಗಯ ಎಂ.ಐ.ಎ.ಎಲ್.ಪಿ ಶಾಲೆಯ ಅಧ್ಯಾಪಕ ಕೆ.ವಿ. ಜಯಪ್ರಸಾದ್ ವಿರುದ್ಧ ಮಕ್ಕಳ ರಕ್ಷಕರು ಮತ್ತೆ ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿದ್ದಾರೆ. ಡಿಇಒರ ನಿರ್ದೇಶ ಮೇರೆಗೆ ಬದಿಯಡ್ಕ ಪೊಲೀಸರು ತಲುಪಿದ ಬಳಿಕವೇ ಅಧ್ಯಾಪಕನಿಗೆ ಹಾಜರು ದಾಖಲಿಸಲು ಅವಕಾಶ ನೀಡಿರುವುದಾಗಿ ಹೇಳಲಾಗುತ್ತಿದೆ. ಪ್ರವೇಶೋತ್ಸವ ಬಳಿಕ ಈ ಅಧ್ಯಾಪಕ ನಿನ್ನೆ ಶಾಲೆಗೆ ತಲುಪಿರುವುದಾಗಿ ರಕ್ಷಕರು ತಿಳಿಸಿದ್ದಾರೆ.

ಮಕ್ಕಳನ್ನು ತರಗತಿ ಕೊಠಡಿಯಲ್ಲಿ ಕೂಡಿಹಾಕುವುದು, ಶೌಚಾಲಯಕ್ಕೆ ತೆರಳಲು ಮಕ್ಕಳಿಗೆ ಅನುಮತಿ ನೀಡದಿರುವುದು ಮೊದಲಾದ ಆರೋಪಗಳ ಹಿನ್ನೆಲೆಯಲ್ಲಿ ಅಧ್ಯಾಪಕನನ್ನು ಅಮಾನತುಗೊಳಿಸಲಾಗಿತ್ತು. ಅಧ್ಯಾಪಕನ ಅಮಾನತು ಕ್ರಮ ಮುಂದುವರಿಸದಿದ್ದಲ್ಲಿ ಮಕ್ಕಳನ್ನು ಈ ಶಾಲೆಯಿಂದ ಬೇರೆಡೆಗೆ ಸ್ಥಳಾಂತರಿಸುವುದಾಗಿ ಅಧಿಕಾರಿಗಳಿಗೆ  ಮನವಿ ಸಲ್ಲಿಸುವುದಾಗಿ ರಕ್ಷಕರು ತಿಳಿಸಿದ್ದಾರೆನ್ನಲಾಗಿದೆ. ಅಧ್ಯಾಪಕನ ವಿರುದ್ಧ ಬೇರೆಯೂ ದೂರು ಗಳಿವೆಯೆಂದು ತಿಳಿದುಬಂದಿದೆ.

You cannot copy contents of this page