ವೈದ್ಯಶಾಲೆಗೆ ನುಗ್ಗಿ ಮಾಲಕನಿಗೆ ಹಲ್ಲೆ: 3ಮಂದಿ ವಿರುದ್ಧ ಕೇಸು

ಉಪ್ಪಳ: ಆಯುರ್ವೇದ ಮದ್ದಿನಂಗಡಿಗೆ ನುಗ್ಗಿ ಅದರ ಮಾಲಕನಿಗೆ ಹಲ್ಲೆಗೈದ ಆರೋಪದಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ಸಮೀಪ ಕಾರ್ಯಾಚರಿಸುವ ಧನ್ವಂತರಿ ವೈದ್ಯಶಾಲೆಯ ಮಾಲಕ ಕಯ್ಯಾರು ಕುಂಡಚ್ಚಕಟ್ಟೆಯ ಬೀಡು ನಿವಾಸಿ ರವಿಚಂದ್ರ ಕೆ. ನೀಡಿದ ದೂರಿನಂತೆ ಉಪ್ಪಳ ನಿವಾಸಿ ಸವಾದ್ ಸೇರಿದಂತೆ 3 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೊನ್ನೆ ಮಧ್ಯಾಹ್ನ ರವಿಚಂದ್ರರ ವೈದ್ಯಶಾಲೆ ಸಮೀಪ ನಿಲ್ಲಿಸಿದ್ದ ಅವರ ಕಾರಿನ ಸಮೀಪದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಆರೋಪಿಗಳ ಫೊಟೋ ತೆಗೆದ ದ್ವೇಷದಿಂದ ಆರೋಪಿಗಳು ವೈದ್ಯಶಾಲೆಗೆ ನುಗ್ಗಿ ರವಿಚಂದ್ರರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದುದಾಗಿ ದೂರಲಾಗಿದೆ.

You cannot copy contents of this page